ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕಾರೇಶ್ ರೈ ಕೆಡೆಂಜಿ ಮಾತುಗಳನ್ನಾಡುತ್ತಾ ಇಂದು ಸುಳ್ಯದಲ್ಲಿ ಓರ್ವ ಲತೀಶ್ ಗುಂಡ್ಯನ ಗಡಿಪಾರು ಮಾಡಿದ್ದೀರಿ ಆದ್ರೆ ನೀವು ಓರ್ವನನ್ನು ಮಾಡಿದಲ್ಲಿ ಅವರಂತಹ ಸಾವಿರಾರು ಜನ ಮತ್ತೆ ಬರ್ತಾರೆ ತಾಕತ್ತಿದ್ದರೆ ತಡೆಯಿರಿ ಎಂದು ಹೇಳಿದರು. ಅಲ್ಲದೇ ರಾಮನ ಹೆಸರು ಇಟ್ಟುಕೊಂಡಿರುವ ಸಿದ್ದರಾಮಯ್ಯ ಈ ರೀತಿಯ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಭಾರತವು ಕ್ರೀಕೆಟ್ ನಲ್ಲಿ ಸೋತಿರಬಹುದು ಆದರೆ ಭಾರತ ಎಂದು ಸೋಲಲ್ಲಾ ಸೋಲಲು ಬಿಕಡಲ್ಲ ಎಂದು ಹೇಳಿದರು. ಪೋಲಿಸ್ ಇಲಾಖೆ ಮೇಲೆ ಹಿಂದೆ ನಂಬಿಕೆಗಳು ಇದ್ದವು ಆದ್ರೆ ಇಂದು ಆ ನಂಬಿಕೆಗಳು ಇಲ್ಲವಾಗಿದೆ ಎಂದು ಹೇಳಿದರು. ನಾವು ಅದೆಷ್ಟೋ ಅಡೆತಡೆಗಳನ್ನು ಸಹಿಸಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ್ದೇವೆ ಇನ್ನು ಇಂತಹ ನೋಟಿಸ್ ಗಳಿಗೆ ನಾವು ಬಗ್ಗುವುದಿಲ್ಲಾ ಎಂದು ಹೇಳಿದರು.
ಪ್ರಮುಖ ಭಾಷಣಕಾರರಾಗಿ ಆಗಮಿಸಿದ ಶರಣ್ ಪಂಪ್ವೆಲ್ ಮಾತಾನಾಡುತ್ತಾ ಪುತ್ತೂರು ಸಹಾಯಕ ಆಯುಕ್ತರು ನೀಡಿದ ನೋಟಿಸ್ ಕೂಡಲೇ ಹಿಂಪಡೆಯಬೇಕು ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಗೋವು ಹಿಂದು ಹೆಣ್ಣುಮಕ್ಕಳ ಮತ್ತು ದೇಶದ ರಕ್ಷಣೆಗಾಗಿ ನಾವು ಯಾವತ್ತು ಕೂಡ ಕಟಿಬದ್ದರಾಗಿದ್ದೇವೆ ಎಂದು ಹೇಳಿದರು ಪ್ರತಿಭಟನಾ ಸಭೆಯಲ್ಲಿ ಸೋಮಶೇಖರ ಪೈಕಾ , ಸುಬೋದ್ ಶೆಟ್ಟಿ ಮೇನಾಲ , ಬೂಡ ರಾಧಾಕೃಷ್ಣ ರೈ , ನಮೀತಾ ಪ್ರವೀಣ್ ರಾವ್ , ಪ್ರಭಾ , ಕೃತಿಕಾ , ಲತಾ , ಹರಿಪ್ರಸಾದ್ ಎಲಿಮಲೆ , ಮಧುಸೂದನ್ , ನವೀನ್ ಎಲಿಮಲೆ , ಜಿತೇಶ್ ಉಬರಡ್ಕ , ಸನತ್ ಚೊಕ್ಕಾಡಿ , ಪ್ರಕಾಶ್ , ಮಹೇಶ್ ರೈ ಮೇನಾಲ , ಲತೀಶ್ ಗುಂಡ್ಯ , ಗುಣಾವತಿ ಕೊಲ್ಲಂತಡ್ಕ , ಪುಷ್ಪ ಮೇದಪ್ಪಾ , ಭಾನುಪ್ರಕಾಶ್ , ಅಶೋಕ್ ಅಡಕ್ಕಾರ್ , ವರ್ಷಿತ್ ಚೊಕ್ಕಾಡಿ ಮತ್ತಿತರು ಉಪಸ್ಥಿತಿತರಿದ್ದರು.