ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು 11 ವರ್ಷ ಕಳೆದರೂ ಆರೋಪಿಗಳಿಗೆ ಶಿಕ್ಷೆಯಾಗದಿರುವುದು ದುರಂತವೇ ಸರಿ. ಇದೀಗ ಪ್ರಕರಣದ ಕೇಸು ಹಳ್ಳ ಹಿಡಿಯುತ್ತಿರುವ ಹಿನ್ನೆಲೆ ಜನಾಕ್ರೋಶ ಭುಗಿಲೇಳುವಂತೆ ಮಾಡಿದೆ. ರಾಜ್ಯಾದ್ಯಂತ ಸೌಜನ್ಯ ಅಭಿಮಾನಿಗಳು ಮರುತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.
ನ.20 ರಂದು ಸೌಜನ್ಯ ಪರ ನ್ಯಾಯಕ್ಕಾಗಿ ಉಬರಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ವೇದಿಕೆ ತಯಾರಾಗಿದ್ದು ಸುಮಾರು 3000 ಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಎಂದು ಸಂಘಟಕರು ತಿಳಿಸಿದ್ದಾರೆ. ಉಬರಡ್ಕದಿಂದ ಮಿತ್ತೂರು ಹೋಗುವ ರಸ್ತೆ ಬದಿ ವಿಶಾಲ ಜಾಗವನ್ನು ಸಮತಟ್ಟು ಗೊಳಿಸಲಾಗಿದೆ. ಪಾರ್ಕಿಂಗ್ ಗಾಗಿ ಉಬರಡ್ಕ ಪೇಟೆ, ಪಂಚಾಯತ್ ಎದುರಿನ ಜಾಗ ಹಾಗೂ ಉಬರಡ್ಕದಿಂದ ಕಂದಡ್ಕ ಹೋಗುವ ರಸ್ತೆ ಬದಿ ವ್ಯವಸ್ಥೆ ಮಾಡಲಾಗಿದೆ.
ಪ್ರತಿಭಟನಾ ಸಭೆಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ನಿವೃತ್ತ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ , ನ್ಯಾಯವಾದಿ ಮೋಹಿತ್ ಕುಮಾರ್ , ಸೌಜನ್ಯಳ ತಾಯಿ ಕುಸುಮಾವತಿ ಆಗಮಿಸಲಿದ್ದಾರೆ.