ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ದೂರವಾಣಿ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಪ್ಪ ಗೌಡ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ “ಸಂಪಾಜೆ ಗಡಿಕಲ್ಲಿನಲ್ಲಿ ನೂತನ ಅಂಗನವಾಡಿ ಕೇಂದ್ರ ಮಾಡುವ ಮೂಲಕ ಈ ಭಾಗದಲ್ಲಿ ಬಹಳ ಉಪಯೋಗ ಆಗಿದೆ ಈ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ” ಎಂದರು.
ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಶುಭ ಹಾರೈಸಿದರು.ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಮಾತನಾಡಿ ಗಡಿಕಲ್ಲು ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿಯಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರ ಅಗತ್ಯ. ಪ್ರತಿಯೊಬ್ಬ ಪೋಷಕರು ನೂತನ ಅಂಗನವಾಡಿ ಕೇಂದ್ರಕ್ಕೆ ಸಹಕಾರ ನೀಡುವಂತೆ ವಿನಂತಿ ಮಾಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ, ಶ್ರೀಮತಿ ಚಂದ್ರಾವತಿ ಕಳುಮೆ, ಬಾಲವಿಕಾಶ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಮ್ಲ ಹನೀಫ್, ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಅಂಗನವಾಡಿ ಕಾರ್ಯಕರ್ತೆ ಶೀಲಾವತಿ ಅಂಗನವಾಡಿ ಸಹಾಯಕಿ ಪುಷ್ಪಾವತಿ ಕಾರ್ಯಕ್ರಮ ಸಂಘಟಿಸಿ, ಸ್ವಾಗತಿಸಿದರು. ಮಕ್ಕಳಿಗೆ ಪ್ರಶಸ್ತಿ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು.