ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ಬಂಟರ ಸಮಾವೇಶದಲ್ಲಿ ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ 2023ರ SSLC ಮತ್ತು PUCಯಲ್ಲಿ ಪಾಸಾದ (ಅಂಕಗಳ ಪರಿಗಣನೆ ಇಲ್ಲ)ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಬಿಪಿಎಲ್ ಪಡಿತರ ಚೀಟಿಯ ಮತ್ತು ಮಾರ್ಕ್ ಕಾರ್ಡಿನ ಪ್ರತಿಯನ್ನು ಒಂದು ಪಾಸ್ ಪೋರ್ಟ್ ಸೈಜ್ ಫೋಟೋದೊಂದಿಗೆ ತಮ್ಮ ಮಾಹಿತಿಯನ್ನು ಹಾಗೂ ಪ್ರತಿಭಾ ಪುರಸ್ಕಾರಕ್ಕಾಗಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳ ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳ ಮತ್ತು ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಮಾಹಿತಿ ಯನ್ನು ನವಂಬರ ತಿಂಗಳ 25 ರ ಮೊದಲು ಆಯಾ ವಲಯದ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಗಳಲ್ಲಿ ಅಥವಾ ಸಂಘದ ಕಛೇರಿ ಕಾರ್ಯದರ್ಶಿಗಳಾದ ಶ್ರೀ ಕುಸುಮಾಧರ ರೈ ಬೂಡು ಇವರಲ್ಲಿ
ನೀಡಬೇಕಾಗಿ ಈ ಮೂಲಕ ವಿನಂತಿಸಲಾಗಿದೆ ಎಂದು
ಸುಭಾಷ್ಚಂದ್ರ ರೈ ಪ್ರಧಾನ ಕಾರ್ಯದರ್ಶಿಗಳು
ಬಂಟರ ಸಂಘ ( ರಿ), ಸುಳ್ಯ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Sunday
- November 24th, 2024