ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಸಭೆಯ ನ.3 ರಂದು ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಭೆಯ ವೇದಿಕೆಯಲ್ಲಿ ಆರಂತೋಡು ಗ್ರಾಪಂ ಅಧ್ಯಕ್ಷರಾದ ಕೇಶವ ಅಡ್ತಲೆ, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷೆ ವೀಣಾ ವಸಂತ್ ಮತ್ತು ಮುರುಳ್ಯ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಜಾನಕಿ ಮುರುಳ್ಯ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ವನ್ನು ರಚಿಸುವ ಬಗ್ಗೆ ತೀರ್ಮಾನಿಸಲಾಯಿತು.
ನೂತನ ಒಕ್ಕೂಟದ ಅಧ್ಯಕ್ಷರಾಗಿ ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪ್ರ. ಕಾರ್ಯದರ್ಶಿಯಾಗಿ ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಸಂಚಾಲಕರಾಗಿ ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಭಟ್ ಕರಿಕ್ಕಳ ಆಯ್ಜೆಯಾದರು. ಉಪಾಧ್ಯಕ್ಷರಾಗಿ ಮಡಪ್ಪಾಡಿ ಗ್ರಾ.ಪಂ. ನ ಶ್ರೀಮತಿ ಉಷಾ ಜಯರಾಮ್, ಕೊಡಿಯಾಲ ಗ್ರಾ.ಪಂ.ನ ಹರ್ಷನ್ ಕೆ.ಟಿ., ಸಂಪಾಜೆ ಗ್ರಾ.ಪಂ.ನ ಎಸ್.ಕೆ. ಮಹಮ್ಮದ್ ಹನೀಫ್,ಆಲೆಟ್ಟಿ ಗ್ರಾ.ಪಂ.ನ ವೀಣಾ ವಸಂತ್ , ಐವರ್ನಾಡು ಗ್ರಾ.ಪಂ. ನ ಬಾಲಕೃಷ್ಣ ಕೀಲಾಡಿ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವಿಜಯ ಕುಮಾರ್ , ಮುರುಳ್ಯ ಗ್ರಾ.ಪಂ. ಕುಮಾರಿ ಜಾನಕಿ ಮುರುಳ್ಳ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಧನಂಜಯ ಕುಮಾರ್, ಜಾಲ್ಸೂರು ಗ್ರಾ.ಪಂ. ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಕನಕಮಜಲು ಗ್ರಾ.ಪಂ. ರವಿಚಂದ್ರ ಕಾಪಿಲ, ಸದಸ್ಯರುಗಳಾಗಿ ಕಳಂಜ ಗ್ರಾ.ಪಂ.ಶ್ರೀಮತಿ ಪ್ರೇಮಲತಾ, ಬಾಳಿಲ ಗ್ರಾ.ಪಂ.ಶ್ರೀಮತಿ ಪಾವನ, ಉಬರಡ್ಕ ಗ್ರಾ.ಪಂ.ಶ್ರೀಮತಿ ಪೂರ್ಣಿಮಾ ಸೂಂತೋಡು, ಮರ್ಕಂಜ ಗ್ರಾ.ಪಂ. ಶ್ರೀಮತಿ ಗೀತಾ ಎಚ್. ಎಂ, ಪಂಜ ಗ್ರಾ.ಪಂ. ಶ್ರೀಮತಿ ವಿಜಯಲಕ್ಷ್ಮಿ, ಅಮರ ಮುಡ್ನೂರು ಗ್ರಾ.ಪಂ. ಶ್ರೀಮತಿ ಭುವನೇಶ್ವರಿ ಸಿ. ಎಸ್., ಮಂಡೆಕೋಲು ಗ್ರಾ.ಪಂ ಶ್ರೀಮತಿ ಪ್ರತಿಮಾ ಹೆಬ್ಬಾರ್, ಬೆಳ್ಳಾರೆ ಗ್ರಾ.ಪಂ. ಶ್ರೀಮತಿ ನಮಿತಾ ಎಲ್. ರೈ, ಗುತ್ತಿಗಾರು ಗ್ರಾ.ಪಂ.ಶ್ರೀಮತಿ ಸುಮಿತ್ರ ಮೂಕಮಲೆ, ಪೆರುವಾಜೆ ಗ್ರಾ.ಪಂ.ಜಗನ್ನಾಥ ಪೂಜಾರಿ, ಕೊಲ್ಲಮೊಗ್ರ ಗ್ರಾ.ಪಂ. ಶ್ರೀಮತಿ ಜಯಶ್ರೀ ಚಾಂತಾಳ ಹಾಗೂ ಖಾಯಂ ಸದಸ್ಯರಾಗಿ ಲೀಲಾವತಿ ಡಿ ದೇವಚಳ್ಳ, ಶ್ರೀಮತಿ ಸಂಧ್ಯಾ ಪಿ.ಈ ಮರ್ಕಂಜ, ಭವಾನಿ ಸಿ.ಎ. ಅರಂತೋಡು, ಸುಮತಿ ಎಸ್ ಸಂಪಾಜೆ, ಶ್ರೀಮತಿ ಚಿತ್ರ ಕೊಡಿಯಾಲ, ಶ್ರೀಮತಿ ಲೀಲಾವತಿ ಐವರ್ನಾಡು, ಬಾಲಕೃಷ್ಣ ಕೆ ಕಳಂಜ, ಶ್ರೀಮತಿ ಜಾನಕಿ ಅಮರ ಮುಡ್ನೂರು, ಶ್ರೀಮತಿ ಶಾರವಾ ಯು ಕನಕಮಜಲು, ಶ್ರೀಮತಿ ಶಾಹಿನಾಜ್ ಪೆರುವಾಜೆ, ಶ್ರೀಮತಿ ಮೋಹಿನಿ ಎಂ ಕಲ್ಮಡ್ಕ, ಶ್ರೀಮತಿ ವಂದನಾ ಹೊಸತೋಟ ನೆಲ್ಲೂರು ಕೆಮ್ರಾಜೆ, ಕೆ ಯು ಕುಶಲ ಮಂಡೆಕೋಲು, ಶ್ರೀಮತಿ ಕಮಲ ಆಲೆಟ್ಟಿ, ಶ್ರೀಮತಿ ಚಿತ್ರಕುಮಾರಿ ಉಬರಡ್ಕ, ಶ್ರೀಮತಿ ವೀಣಾ ಬೆಳ್ಳಾರೆ, ರಮೇಶ್ ರೈ ಅಗಲ್ಪಾಡಿ ಬಾಳಿಲ, ಶ್ರೀಮತಿ ಭಾರತಿ ಗುತ್ತಿಗಾರು, ಶ್ರೀಮತಿ ಬೇಬಿ ಅಜ್ಜಾವರ, ಅಶ್ವಥ್ ಯಾಳದಾಳು ಕೊಲ್ಲಮೊಗ್ರ, ಜಯಂತ ಬಾಳುಗೋಡು ಹರಿಹರಪಲ್ಲತ್ತಡ್ಕ,ಶ್ರೀಮತಿ ತಿರುವಲೇಶ್ವರಿ ಮರಸಂಕ ಜಾಲ್ಸೂರು, ಶ್ರೀಮತಿ ಸುಜಾತ ಹೆಚ್ ಮಡಪ್ಪಾಡಿ ಇವರು ಆಯ್ಕೆಯಾದರು.