ನಿರಂತರ 38ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ತೊಡಗಿಸಿಕೊಂಡು 3500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿ ಕರ್ತವ್ಯವನ್ನು ಸೇವಾ ಕಾರ್ಯವೆಂದು ಪರಿಗಣಿಸಿ ಮುಂದುವರೆಯುತ್ತಿರುವ ಮಾಂಡವಿ ಮೋಟಾರ್ಸ್ ಸುಳ್ಯ ಸಂಸ್ಥೆಯನ್ನು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರ್ ವತಿಯಿಂದ ಗೌರವಿಸಲಾಯಿತು. ಹಿಂದೆ ಟ್ರಸ್ಟ್ ಆಂಬುಲೆನ್ಸ್ ವಾಹನ ಅಪಘಾತಗೊಂಡು ಸಂಪೂರ್ಣವಾಗಿ ನಜ್ಜುಗುಜ್ಜು ಆಗಿದ್ದು ಮತ್ತೆ ಟ್ರಸ್ಟ್ ಗೆ ಹೊಸ ಆಂಬುಲೆನ್ಸ್ ವಾಹನ ಬರುವಲ್ಲಿ ನಿಸ್ವಾರ್ಥ ಸೇವೆ ನೀಡಿ ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಈ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಮಾಂಡವಿ ಮೋಟಾರ್ಸ್ ಸಂಸ್ಥೆಯ ಮಾರ್ಕೆಟಿಂಗ್ ಮೆನೇಜರ್ ಸುರೇಶ್ ಭಟ್, ಸೇವಾ ಮುಖ್ಯಸ್ಥ ಸುದೇಶ್ ಜೈನ್, ದುರ್ಗಾ ದಾಸ್ ಕಡ್ಲಾರು, ಪುನೀತ್ ಹಾಲೇಮಜಲ್,ವಿಮಾ ವಿಭಾಗ ಪ್ರಮುಖ್ ಸಂದೀಪ್, ಭರತ್, ಹರೀಶ್,ಹಾಗೂ ಸರ್ವ ಸಿಬ್ಬಂದಿಗಳು,ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ,ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ, ಉಪಾಧ್ಯಕ್ಷ ಮೋಹನ್ ದಾಸ್ ಶಿರಾಜೆ, ಪದ್ಮನಭ ಹಲ್ಲಡ್ಕ ಉಪಸ್ಥಿತರಿದ್ದರು
- Saturday
- November 23rd, 2024