ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ(ರಿ.) ಮಂಗಳೂರು, ವಿಜಯ ಅಭಿವೃದ್ಧಿ ಸಮಿತಿ ನಾಲ್ಕೂರು, ಸುಳ್ಯ ತಾಲೂಕಿನ ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.) ಗುತ್ತಿಗಾರು ಇವರ ಸಹಯೋಗದೊಂದಿಗೆ 3 ದಿನದ ಕೌದಿ ಕೌಶಲ್ಯ ತರಬೇತಿಯು ಅ.26 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ನಾಲ್ಕೂರು ಉಪ ವಲಯ ಅರಣ್ಯಾಧಿಕಾರಿ ಸದಾಶಿವ ಸಿಂಧಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ ನಾಲ್ಕೂರು ಇದರ ಅಧ್ಯಕ್ಷರಾದ ಉದಯಕುಮಾರ್.ಡಿ.ಆರ್, ಕಾರ್ಯದರ್ಶಿ ದಿನೇಶ್ ಹಾಲೆಮಜಲು, ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ, ತರಬೇತಿ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮನೋರಮಾ ಮುಚ್ಚಾರ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತಿ ಕಾರ್ಯಕ್ರಮ ಗುತ್ತಿಗಾರು, ದೇವಚಳ್ಳ, ಉಬರಡ್ಕ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಅಜ್ಜಾವರ, ಮಡಪ್ಪಾಡಿ ಈ 7 ಗ್ರಾಮ ಪಂಚಾಯತ್ ಗಳ ಸಂಜೀವಿನಿ ಒಕ್ಕೂಟಗಳ ಸದಸ್ಯರು ಹಾಗೂ ಕಿಶೋರಿಯರು, ಎಂ.ಬಿ.ಕೆ, ಎಲ್.ಸಿ.ಆರ್.ಪಿ, ಸಖಿಗಳು, ಗುತ್ತಿಗಾರು ಗ್ರಂಥಪಾಲಕಿ ಅಭಿಲಾಷಾ ಮೋಟ್ನೂರು ಹಾಜರಿದ್ದರು. ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನಾಲ್ಕೂರು ಇದರ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಸ್ವಾಗತಿಸಿ ಪ್ರಸ್ತಾವನೆ ಮಂಡಿಸಿದರು. ನೀಲಾವತಿ ಮೊಗ್ರ ಪ್ರಾರ್ಥಿಸಿ ಲತಾ ಅಜಡ್ಕ ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ಯಮಿತಾ ಪೂರ್ಣಚಂದ್ರ ಪೈಕ ಹಾಗೂ ಶಿಶಿಮ ಜಾಕೆ ಕಾರ್ಯಕ್ರಮ ನಿರೂಪಿಸಿದರು.
ಮದ್ಯಾಹ್ನದ ಸೆಷನ್ ನಲ್ಲಿ ಅಮೂಲ್ಯ ಸಾಕ್ಷರತಾ ಕೇಂದ್ರ ಸುಳ್ಯ ಇವರ ವತಿಯಿಂದ ಕೆನರಾ ಬ್ಯಾಂಕ್ ಗುತ್ತಿಗಾರು ಇದರ ಸಹಯೋಗದೊಂದಿಗೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಬ್ಯಾಂಕ್ ಮಾಹಿತಿ ನೀಡಲಾಯಿತು. PMEGP, PMFME, PMJBY, PMJJY ಹಾಗೂ ಇನ್ನಿತರ ಬ್ಯಾಂಕ್ ಸೌಲಭ್ಯಗಳ ಮಾಹಿತಿಯನ್ನು ಅಮೂಲ್ಯ ಸಾಕ್ಷರತಾ ಕೇಂದ್ರದ ಸುಜಾತ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ, ಗ್ರಾಮ ಪಂಚಾಯತ್ ನರೇಗಾ ಸಿಬ್ಬಂದಿ ಶ್ರೀಮತಿ ತೇಜಾವತಿ ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- November 21st, 2024