Ad Widget

ಅರಂಬೂರಿನ ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ, ಅರಂಬೂರು ಇಲ್ಲಿ ಮೆಂಡ ಫೌಂಡೇಶನ್, ಎಸ್.ಪಿ. ಗ್ಲೋಬಲ್ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಒಂದು ಲಕ್ಷ 75 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ನ್ನು ಕೊಡುಗೆಯಾಗಿ ನೀಡಲಾಗಿದ್ದು, ಈ ಸ್ಮಾರ್ಟ್ ಸಿಸ್ಟಮ್ ಉದ್ಘಾಟನಾ ಕಾರ್ಯಕ್ರಮ ಜು.22 ರಂದು ನಡೆಯಿತು.

. . . . . .

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷರಾದ ರಮೇಶ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್  ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನವನ್ನು ಉದ್ಘಾಟಿಸಿದರು. ಸೆಲ್ಕೋ ಸಂಸ್ಥೆಯ ಏರಿಯಾ ಮ್ಯಾನೇಜರ್ ಪ್ರಸಾದ್ ಬಿ. ಅವರು ಮಾತನಾಡಿ ಸೆಲ್ಕೋ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕೆಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಇ-ಶಾಲಾ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇವಲ ಖಾಸಗಿ ಶಾಲೆಗಳ ಮಕ್ಕಳಿಗಷ್ಟೇ ಸೀಮಿತವಾಗಿದ್ದ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಸೆಲ್ಕೋ ಸಂಸ್ಥೆಯು ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೂ ನೀಡುವ ಯೋಜನೆ ಮಾಡಿದೆ ಎಂದು ಹೇಳಿದರು. ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನವು ಸಂಪೂರ್ಣ ಸೌರ ಶಕ್ತಿಯಿಂದ ಉಪಯೋಗ ಆಗುತ್ತಿದ್ದು ದಿನನಿತ್ಯ ಮಕ್ಕಳಿಗೆ ಪಾಠ ಮಾಡಬಹುದು. ಸುಳ್ಯ ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಶಾಲೆಗಳಿಗೆ ಅಳವಡಿಕೆ ಮಾಡಲಾಗಿದ್ದು ವಿವಿಧ ಕಂಪೆನಿಗಳ ಸಾಮಾಜಿಕ ಭಾಧ್ಯತ ನಿಧಿಯ ಸಹಕಾರದೊಂದಿಗೆ ಸ್ಥಳೀಯ ಶಾಲೆಗಳ ನೆರವಿನಿಂದ ಈ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದ್ದು, ಈ ಬಾರಿ ಜಿಲ್ಲೆಯ 20 ಶಾಲೆಗಳಿಗೆ ಸಂಪೂರ್ಣ ನೆರವಿನೊಂದಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸುವ ವ್ಯವಸ್ಥೆ ಮಾಡಿದೆ. ಸುಳ್ಯ ತಾಲೂಕಿನ 7 ಶಾಲೆಗಳಲ್ಲಿ ಈ ಯೋಜನೆ ಮಾಡಿದೆ. ಸ್ಥಳೀಯ ದಾನಿಗಳು ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ಶಾಲೆಗಳಿಗೆ ಅನುಷ್ಠಾನ ಮಾಡಲು ಸೆಲ್ಕೋ ಸಂಸ್ಥೆಯಿಂದ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು . ಶಾಲಾ ಶಿಕ್ಷಕಿ ಮಾನಸರವರು ಕಳೆದ 2 ವರುಷಗಳಿಂದ  ಸ್ಮಾರ್ಟ್ ಕ್ಲಾಸ್ ಸಿಸ್ಟಮ್‌ಗಾಗಿ ಬೇಡಿಕೆ ಇಟ್ಟಿದ್ದುದರಿಂದ ಸೌಲಭ್ಯ ಒದಗಿ ಬಂದಿದಡ ಎಂದು ಅವರು ಹೇಳಿದರು. ಸ್ಮಾರ್ಟ್ ಕ್ಲಾಸ್ ಉದ್ಘಾಟನೆಗೈದು ಮಾತಾನಾಡಿದ ಹರೀಶ್ ಬಂಟ್ವಾಳ್ ಅವರು ವಿವಿಧ ಕ್ಷೇತ್ರಗಳಲ್ಲಿ ಸೌರಶಕ್ತಿಯ ಮಹತ್ವ ಹಾಗೂ ಪ್ರಯೋಜನ, ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನದಿಂದ ಶಾಲಾ ಮಕ್ಕಳಿಗೆ ಸಿಗುವ ಗುಣಮಟ್ಟದ ಶಿಕ್ಷಣದ ಬಗ್ಗೆ ವಿವರಣೆ ನೀಡಿದರು.

ಸೆಲ್ಕೋ ಸುಳ್ಯ ಶಾಖೆಯ ಮ್ಯಾನೇಜರ್ ಆಶಿಕ್ ಬಿ.ಎ.
ಮಕ್ಕಳಿಗೆ ತಂತ್ರಜ್ಞಾನದ ಉಪಯೋಗ ಹಾಗೂ ಬಳಕೆ ಬಗ್ಗೆ ವಿವರಿಸಿದರು.ಸಭಾಧ್ಯಕ್ಷ ರಮೇಶ್ ಅವರು ಮಾತನಾಡಿ ಸರಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ಸಾಧ್ಯವಾಗುತ್ತದೆ. ಇನ್ನು ಮುಂದೆ ಈ ಪರಿಸರದ ಯಾವ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದೆ ಸರಕಾರಿ ಶಾಲೆಗೆ ಬರುವಂತಾಗಬೇಕು ಎಂದರು. ಶಾಲೆಯ ಸಹ ಶಿಕ್ಷಕಿ ಮಾನಸ ಅವರು ಶಿಕ್ಷಕರಿಗೆ ನೂತನ ತಂತ್ರಜ್ಞಾನದಿಂದಾದ ಉಪಯೋಗದ ಬಗ್ಗೆ ಅನಿಸಿಕೆ ಹೇಳಿದರು. ವಿದ್ಯಾರ್ಥಿನಿಯರಾದ ಆರಾಧ್ಯ ಮತ್ತು ಛಾಯಾಶ್ರೀ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕಿ ಶ್ರೀಮತಿ ನಳಿನಿ, ಅಲೆಟ್ಟಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೇಖಾ ಸರ್ವೋತ್ತಮ ಶೇಟ್ ಕಾರ್ಯಕ್ರಮದ ಕುರಿತು ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಕಲಾವತಿ ವಂದಿಸಿದರು. ದೈಹಿಕ ಶಿಕ್ಷಕರಾದ ಧನಂಜಯ್ ಮೇರ್ಕಜೆ ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಸದಸ್ಯರು, ಪೋಷಕರು, ಸೆಲ್ಕೋ ಸಂಸ್ಥೆಯ ಸಿಬ್ಬಂದಿಗಳು, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!