Ad Widget

ಸುಳ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ನಂದಕುಮಾರ್ , ಜಿ ಕೃಷ್ಣಪ್ಪ ಬಣಗಳ ಮಧ್ಯೆ ಪರಸ್ಪರ ಹಲ್ಲೆ ಮಾತಿನ ಚಕಮಕಿ, ಪೋಲಿಸ್ ಆಗಮನ !

ಕಡಬ: ಸುಳ್ಯ ಮಿಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಜಿ .ಕೃಷ್ಣಪ್ಪ ಮತ್ತು ನಂದಕುಮಾರ್ ಬಣದ ನಡುವೆ ಬಡಿದಾಡಿಕೊಂಡ ಘಟನೆ ಜು.14ರಂದು ನಡೆದಿದೆ.

. . . . . . . . .

ಕಾಂಗ್ರೇಸ್ ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್. ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ಉಚ್ಚಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ ಜಿ. ಬಣದವರ ಆಕ್ರೋಶಕ್ಕೆ ಕಾರಣವಾಯಿತು ಎನ್ನಲಾಗಿದ್ದು. ಸಭೆಯು ಮಾತಿನ ಚಕಮಕಿ ಮೂಲಕವೇ ಪ್ರಾರಂಭವಾಗಿದ್ದು ಸ್ವತಃ ಕೃಷ್ಣಪ್ಪ ಅವರೇ ಉಚ್ಚಾಟಿತ ಸದಸ್ಯರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದಿರಿ?, ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ಏರು ಧ್ವನಿಯಲ್ಲಿ ರೇಗಿಸಿದ್ದು ಬಳಿಕ ಮುಖಂಡರೋರ್ವರು ಸಭೆಯಲ್ಲಿ ಪ್ರಶ್ನಿಸಿ, ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಇರಲು ಅವಕಾಶ ಇದೆಯೇ? ಎಂದು ಪ್ರಶ್ನಿಸಿದ್ದು, ಅಲ್ಲಿಂದ ಪ್ರಾರಂಭವಾದ ಮಾತಿನ ಚಕಮಕಿ ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿ ಪೋಲಿಸರ ಮಧ್ಯಪ್ರವೇಶದ ಬಳಿಕ ತಣ್ಣಗಾದ ಘಟನೆ ಕಡಬದಲ್ಲಿ ನಡೆಯಿತು. ಕೃಷ್ಣಪ್ಪ ಬಣದ ಮೂರು ನಾಲ್ಕು ಮಂದಿ ಮುಖಂಡರು ನಂದ ಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ ಆರೋಪವೂ ಇದೀಗ ಕೇಳಿಬರುತ್ತಿದ್ದು, ಮಾರಾಮಾರಿ ನಡೆದಿರುವ ವೀಡಿಯೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು . ನಂದಕುಮಾರ್ ಬಣದ ಸಾಮಾಜಿಕ ತಾಣ ನಿರ್ವಹಣೆ ಮಾಡಿದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂಬೇಡ್ಕರ್ ಭವನದ ಚಯರ್ ಗಳನ್ನು ಎಳೆದಾಡಿದ್ದು ಪೋಲಿಸರು ಆಗಮಿಸಿ ಇತ್ತಂಡಗಳಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸೂಚಿಸಿದ್ದು, ಕೊನೆಯಲ್ಲಿಯೂ ಮಾತಿನ ಚಕಮಕಿ ನಡೆದಿದೆ.ಒಟ್ಟಿನಲ್ಲಿ ಸೋಲಿನ ಪರಾಮರ್ಶೆ ಸಭೆಯು ರಣಾಂಗಣವಾದ ಸನ್ನಿವೇಶ ನಡೆದಿರುವುದು. ಮುಂದೆ ಉಭಯ ಬಣಗಳ ವೈಮನಸ್ಸು ಯಾವ ರೀತಿಯಲ್ಲಿ ಕೊನೆಯಾಗಬಹುದು ಸುಳ್ಯ ಕಾಂಗ್ರೆಸ್ ಇಬ್ಬಾಗವಾಯಿತೆ ಎಂಬ ಕುತೂಹಲ ಉದ್ಭವವಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading