ಸುಳ್ಯ ತಾಲೂಕಿನಾಧ್ಯಂತ ಸತತವಾಗಿ ಮಳೆಯಾಗುತ್ತಿದ್ದು ಇತ್ತ ಗುರುಂಪುವಿನಲ್ಲಿ ಬರೆ ಕುಸಿತ ಪ್ರಕರಣ ಹಾಗೂ ನಾನ ಕಡೆಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಜೀವ ಹಾನಿಗು ಮೊದಲೇ ಎಚ್ಚೆತ್ತುಕೊಂಡ ಆಡಳಿತ ವರ್ಗ ಇದೀಗ ಮೊದಲ ಆಶ್ರಯ ಕೇಂದ್ರವನ್ನು ಸುಳ್ಯದ ವಿವೇಕಾನಂದ ವೃತದ ಬಳಿಯಲ್ಲಿನ ಹಾಸ್ಟೆಲ್ ನಲ್ಲಿ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿದ್ದು ತಾಲೂಕು ಆಡಳಿತ ಎಲ್ಲಾ ರೀತಿಯಲ್ಲಿ ಸರ್ವ ಸನ್ನದ್ದವಾಗಿದೆ . ಇತ್ತ ಡಿ ವೈ ಎಸ್ ಪಿ ಗಾನ ಇವರು ಸುಳ್ಯಕ್ಕೆ ಭೇಟಿ ನೀಡಿದ್ದು ಅವರು ಎಲ್ಲಾ ಆಗು ಹೋಗುಗಳ ಕ್ಷಣ ಕ್ಷಣಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು ಇತ್ತ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಸಂಗಮದಲ್ಲಿ “ಸುಳ್ಯ ಕೆಳಮಿಟಿ ಟೀಂ” ಸರ್ವ ರೀತಿಯಲ್ಲಿ ಸನ್ನದ್ದರಾಗಿ ತಕ್ಷಣಕ್ಕೆ ಜನತೆಯ ಸಹಾಯಕ್ಕೆ ಧಾವಿಸುತ್ತಿದೆ. ಪ್ರತಿ ಗ್ರಾಮ ಮಟ್ಟದಲ್ಲಿಯು ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡವು ಈಗಾಗಲೇ ರಚಿಸಲಾಗಿದ್ದು ಮಾನ್ಯ ತಾಹಾಶೀಲ್ದಾರ್ ರವರ ನೇತೃತ್ವದಲ್ಲಿ ಈ ತಂಡಗಳನ್ನು ಮೊನಿಟ್ರಿಂಗ್ ಮಾಡುತ್ತಿದ್ದು ಸಧ್ಯ ಇಂದು ಮುಂಜಾನೆಯೇ ತಾಲೂಕಿನ ಮೊದಲ ಕಾಳಜಿ ಕೇಂದ್ರವನ್ನು ಓಪನ್ ಮಾಡಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
- Friday
- November 1st, 2024