ಬೆಳ್ಳಾರೆ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ 9 ನೇ ಶಾಖೆಯು ಬೆಳ್ಳಾರೆಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಖಜಾನೆಯಾಗಿ ಬೆಳೆಯಲಿದೆ ಎಂದು ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಕಾವೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳಿದರು.
ಬೆಳ್ಳಾರೆಯಲ್ಲಿ ಜು.6ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ 4 ಲಕ್ಷ ಪಾಲು ಬಂಡವಾಳದಿಂದ ಆರಂಭಿಸಿದ ಸಂಸ್ಥೆ ಇಂದು ಎಲ್ಲರ ಸಹಕಾರದಿಂದ ವಾರ್ಷಿಕ 400 ಕೋಟಿ ವ್ಯವಹಾರ ನಡೆಸುತ್ತಿದೆ ಕಡಬದಿಂದ ಆರಂಬಿಸಿ ಪುತ್ತೂರಿನಲ್ಲಿ ಎರಡು ಶಾಖೆ, ಉಪ್ಪಿನಂಗಡಿ, ಕಾಣಿಯೂರು ನೆಲ್ಯಾಡಿ ಹೀಗೆ ಮುಂದುವರೆಸುತ್ತಾ ಬೆಳ್ಳಾರೆಯಲ್ಲಿ 9 ನೇ ಶಾಖೆ ತೆರೆದಿದ್ದು ಸುಳ್ಯದವರ ಸಹಕಾರ ಬಯಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಸಂಚಾಲಕ ಎಂ.ಪಿ.ಉಮೇಶ್ , ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್, ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ
ತ್ರಿವೇಣಿ ರಾವ್ ಕೆ, ಕಾತ್ಯಾಯಿನಿ ಕಾಂಪ್ಲೆಕ್ಸ್ ಮಾಲಕ ಬಿ ಪವನ್ ಶೆಣೈ ಅತಿಥಿಗಳಾಗಿ ಭಾಗವಹಿಸಿದರು. ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೆ, ಸಂಜೀವ ಗೌಡ ಕೆ, ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಲೋಕೇಶ್ ಚಾಕೋಟೆ, ಸುಪ್ರೀತಾ ರವಿಚಂದ್ರ, ತೇಜಸ್ವಿನಿ ಶೇಖರ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಆಂತರಿಕ ಲೆಕ್ಕಪರಿಶೋಧಕರು ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷರು ಲಿಂಗಪ್ಪ ಗೌಡ ತೆಂಕಿಲ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಸಂಘದ ಸಲಹಾ ಸಮಿತಿ ಸದಸ್ಯರಾದ ಎಲ್ಯಣ್ಣ ಗೌಡ ಕುಳ್ಳಂಪಾಡಿ, ಉಮೇಶ್ ಗೌಡ ಕಾನಾವು, ವಾಸುದೇವ ನಡ್ಕ ಉಮೇಶ್ ಗೌಡ, ಮುರಳೀಧರ ಗೌಡ ಕೆಮ್ಮಾರ, ರವೀಂದ್ರ ಗೌಡ ಮರಕಡ, ಪದ್ಮನಾಭ ಬೀಡು, ಸಿ ಕೆ .ನಾರಾಯಣ ಗೌಡ ಆರುವಾರ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಲೋಕೇಶ್ ಚಾಕೋಟೆ ವಂದಿಸಿದರು.ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.