ಸುಳ್ಯ ತಾಲೂಕಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದ ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ನೇತ್ರತ್ವದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ಜರುಗಿತು. ಈ ಸಭೆಯಲ್ಲಿ ಪ್ರತಿ ಗ್ರಾಮದ ಪ್ರಾಕೃತಿಕ ವಿಕೋಪ ನೋಡೆಲ್ ಅಧಿಕಾರಿಗಳು ಸೇರಿದಂತೆ ತಾಲೂಕಿನ ನಾನಾ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಜನತೆಗೆ ಸಮಸ್ಯೆಗಳು ಎದುರಾದಗ ತುರ್ತು ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು ತಮ್ಮ ದೂರವಾಣಿ ಸಂಖ್ಯೆಗಳನ್ನು ಆಫ್ ಮಾಡಿ ಮಾಡಬಾರದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಾ ಎಲ್ಲಾ ಕರೆಗಳನ್ನು ಸ್ವೀಕರಿಸಬೇಕು ಜನತೆಯ ರಕ್ಷಣೆಗೆ ಕೂಡಲೇ ಕಾರ್ಯಪ್ರವೃತರಾಗಬೇಕು ಅಲ್ಲದೇ ಭೂಕುಸಿತ ಪ್ರಕರಣಗಳು, ಮನೆ ಹಾನಿ ಪ್ರಕರಣ, ಕಾಳಜಿ ಕೇಂದ್ರ ಸ್ಥಾಪನೆ/ಗಂಜಿ ಕೇಂದ್ರ ಸ್ಥಾಪನೆ ಹಾಗೂ ತುರ್ತು ಕಾರ್ಯ ಸಿದ್ದವಾಗಿರುವ ವಿಚಾರಗಳು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ತಾಹಾಶೀಲ್ದಾರ್ ಮಂಜುನಾಥ್ , ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ , ತಾಲೂಕು ಪಂಚಾಯತ್ ಇ ಒ ಭವಾನಿಶಂಕರ್ , ಗ್ರಾಮ ಮಟ್ಟದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು , ಗ್ರಾಮ ಆಡಳಿತಾಧಿಕಾರಿಗಳು , ಅಗ್ನಿಶಾಮಕ ದಳ , ಪಿ ಆರ್ ಡಿ ಇಲಾಖೆ , ಲೋಕೋಪಯೋಗಿ ಇಲಾಖೆ , ಮೆಸ್ಕಾಂ , ಅರಣ್ಯ ಇಲಾಖೆ ,ಆರೋಗ್ಯ ಇಲಾಖೆ, ಹೋಂ ಗಾರ್ಡ್ ವಿಭಾಗ ,ಪೋಲೀಸ್ ಇಲಾಖೆ ಸೇರಿದಂತೆ ಇತರ ಗ್ರಾಮ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.