ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇಲ್ಲಿನ ದೀಪ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಸೇರಿ ಸ್ತ್ರೀ ಸಾಮರ್ಥ್ಯ ಯೋಜನೆಯ ಅಡಿಯಲ್ಲಿ ಬಟ್ಟೆ ಚೀಲ ತಯಾರಿಸಲು ಮುಂದಾಗಿದ್ದು, ಇವರು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಸದುದ್ದೇಶವನ್ನು ಹೊಂದಿದ್ದಾರೆ.
ಈ ಬಟ್ಟೆ ಚೀಲ ತಯಾರಿಕಾ ಘಟಕವು ಮಾ.30 ರಂದು ನಡುಗಲ್ಲಿನಲ್ಲಿ ಉದ್ಘಾಟನೆಗೊಂಡಿತು.
ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆ ಇವರು ದೀಪ ಬೆಳಗಿಸುವ ಮೂಲಕ ಬಟ್ಟೆ ಚೀಲ ತಯಾರಿಕಾ ಘಟಕವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಅಧ್ಯಕ್ಷರಾದ ಶ್ರೀಮತಿ ಯಶೋಧ ಬಾಳೆಗುಡ್ಡೆ, ಅಮರ ಸಂಜೀವಿನಿ ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಎನ್.ಆರ್.ಎಲ್.ಎಂ ತಾಲೂಕು ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಶ್ವೇತಾ, ಶ್ರೀಮತಿ ಸುಜಾತ ಅಮೂಲ್ಯ ಸಾಕ್ಷರತಾ ಕೇಂದ್ರ ಸುಳ್ಯ, ದೀಪ ಸಂಜೀವಿನಿ ಸ್ವಸಹಾಯ ಸಂಘದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಬಾಳುಗೋಡು ಇವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ “ಡಿಜಿಟಲ್ ವಹಿವಾಟು ಉತ್ತೇಜಿಸುವ ಅಭಿಯಾನ” ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಚಾರ್ಮತ, ಶ್ರೀಮತಿ ಪ್ರಮೀಳಾ ಭಾಸ್ಕರ ಎರ್ಧಡ್ಕ, ಲೀಲಾವತಿ ಅಂಜೇರಿ, ಹರೀಶ್ ಕೊಯಿಲ, ಲತಾ ಅಜಡ್ಕ, ಅಮರ ಸಂಜೀವಿನಿ ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಕಾರ್ಯದರ್ಶಿ ಯಮಿತಾ ಪೂರ್ಣಚಂದ್ರ ಪೈಕ, ಸಂಜೀವಿನಿ ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ, ಎಲ್.ಸಿ.ಆರ್.ಪಿ ಶಾರದಾ ನಡುಗಲ್ಲು ಹಾಗೂ ದಿವ್ಯ ಹರೀಶ್ ಚತ್ರಪ್ಪಾಡಿ, ಸಂಜೀವಿನಿ ಮಹಿಳೆಯರು ಸೇರಿದಂತೆ ಈ ಬಗ್ಗೆ ಮಾಹಿತಿ ಪಡೆಯಲು ನೆಲ್ಲೂರು ಕೆಮ್ರಾಜೆಯ ಸಂಜೀವಿನಿ ಸದಸ್ಯರಾದ ಸೌಮ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಇಂದಿರಾ ಬಾಳುಗೋಡು ಪ್ರಾರ್ಥಿಸಿ, ತೃಪ್ತಿ ನಡುಗಲ್ಲು ವಂದಿಸಿದರು. ಎಲ್.ಸಿ.ಆರ್.ಪಿ ಶಾರದಾ ನಡುಗಲ್ಲು ಕಾರ್ಯಕ್ರಮ ನಿರೂಪಣೆ ಮಾಡಿದರು.
(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- November 21st, 2024