Ad Widget

ಕವನ : ಸೋಲು ಗೆಲುವು ಸ್ಥಿರವಲ್ಲ, ಪ್ರೀತಿ ಸ್ನೇಹ ಶಾಶ್ವತ…

. . . . . . . . .

ಕೊನೆಯಿರದ ದಾರಿಯಲ್ಲಿ ಕೊನೆ ಹುಡುಕುವ ಕನಸೇತಕೆ…?
ಮೂರು ದಿನದ ಬದುಕಿನಲ್ಲಿ ಗುರಿ ಸೇರುವ ತವಕದಲ್ಲಿ…
ತೆಗಳುವವರ ಮಾತುಗಳಿಗೆ ಕಿವಿಯ ಕೊಟ್ಟು ಸಾಗಬೇಕೇ…?
ಬೆನ್ನು ತಟ್ಟಿ ಜೊತೆಗೆ ನಿಲ್ಲೋ ನಿನ್ನವರು ಜೊತೆಗಿರಲು, ನಿನ್ನ ಜೊತೆಗಿರಲು…
ಪ್ರತಿಯೊಂದು ಹೆಜ್ಜೆಯಲ್ಲೂ ಸವಾಲು ನೂರು ತುಂಬಿರಲು, ಏಕಾಂಗಿ ನೀನಲ್ಲ ನಿನ್ನವರ ಮಧ್ಯದಲ್ಲಿ…
ಜೊತೆಗೆ ಯಾರೂ ಇಲ್ಲವೆಂದು ಕೊರಗದಿರು ನೀನಿಲ್ಲಿ, ನಿನ್ನವರ ಪ್ರೀತಿ ಮುಂದೆ ಬೇರೆನು ಬೇಕಿಲ್ಲಿ, ನಿನಗೆ ಬೇರೇನು ಬೇಕಿಲ್ಲಿ…?
ಕನಸು ಕೈಗೆ ಸಿಗದು ಎಂದು ಕೊರಗದಿರು ನೀನಿಲ್ಲಿ, ಪ್ರಯತ್ನದಿಂದ ನಷ್ಟವೇನು ಎಂಬ ಮಾತು ಇರಲಿ ನಿನ್ನ ಮನದಲ್ಲಿ…
ಸೋಲುಗಳೇ ಕಲಿಸುವುದು ಗೆಲುವ ಗುಟ್ಟು ಬದುಕಿನಲ್ಲಿ, ಮೊದಲ ಸೋಲೇ ಮುನ್ನುಡಿಯು ನಿನ್ನ ಬದುಕ ಹಾದಿಯಲ್ಲಿ…
ಮರೆಯದಿರು, ಮರೆಯದಿರು, ಮರೆತು ನೀನು ನಡೆಯದಿರು ಸೋಲಿನಲ್ಲೂ ನಿನ್ನೊಂದಿಗೆ ಹೆಜ್ಜೆ ಇಟ್ಟ ನಿನ್ನವರ…
ಸೋಲು-ಗೆಲುವು ಸ್ಥಿರವಲ್ಲ, ಪ್ರೀತಿ ಸ್ನೇಹ ಶಾಶ್ವತ, ಸೋಲಿನಲ್ಲೂ ಕೈ ಹಿಡಿದವರು ಜೊತೆಗಿರುವರು ಕೊನೆತನಕ, ನಿನ್ನ ಸೋಲಿನಲ್ಲೂ ಕೈ ಹಿಡಿದವರು ಜೊತೆಗಿರುವರು ಕೊನೆತನಕ…

. . . . . . .

✍️ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading