2023ರ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾ.31ರಿಂದ ಆರಂಭಗೊಳ್ಳಲಿದೆ. ಈ ಬಾರಿ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದ್ದು ಒಟ್ಟು 1848 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮಾ.31 : ಪ್ರಥಮ ಭಾಷೆ
ಎ.3: ಗಣಿತ
ಎ.6 : ದ್ವಿತೀಯ ಭಾಷೆ
ಎ.10: ವಿಜ್ಙಾನ
ಎ.12 : ತೃತೀಯ ಭಾಷೆ
ಎ.15 : ಸಮಾಜ ವಿಜ್ಷಾನ
ಹಾಲ್ ಟಿಕೆಟ್ ಕಡ್ಡಾಯ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಹಾಲ್ ಟಿಕೇಟ್ ಕಡ್ಡಾಯವಾಗಿ ತರಬೇಕು. ಒಂದು ವೇಳೆ ಮರೆತ ಹೋದರೂ ಪರೀಕ್ಷಾ ಕೇಂದ್ರದಲ್ಲಿ ಚಿಂತೆ ಮಾಡಬೇಕಾಗಿಲ್ಲ. ಅಂತವರು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಭೇಟಿಯಾಗಬಹುದು. ಬಳಿಕ ಆ ಪರೀಕ್ಷಾ ಕೇಂದ್ರದಲ್ಲಿ ಆ ವಿದ್ಯಾರ್ಥಿಯ ಹಾಲ್ ಟಿಕೇಟ್ ನೋದಾವಣೆ ಸಂಖ್ಯೆಯನ್ನು ಪರೀಶಿಲಿಸಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಬಸ್ನಲ್ಲಿ ಬರುವ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಹಾಲ್ ಟಿಕೆಟ್ ತೋರಿಸಿ ಬಸ್ನಲ್ಲಿ ಉಚಿತವಾಗಿ ಪ್ರವೇಶ ಮಾಡಬಹುದು.
ಸುಳ್ಯ ತಾಲೂಕಿನಲ್ಲಿ 36 ಪ್ರೌಢಶಾಲೆಗಳಿವೆ. ಇಲ್ಲಿಂದ ಒಟ್ಟು 1848 ವಿದ್ಯಾರ್ಥಿಗಳು ಈ ಬಾರೀ ಪರೀಕ್ಷೆ ಬರೆಯಲಿದ್ದಾರೆ. ಪುನಾರಾವರ್ತಿತ ವಿದ್ಯಾರ್ಥಿಗಳು 55 ಮಂದಿ ನೋದಾವಣೆ ಮಾಡಿದ್ದಾರೆ. ಆದರೆ ಖಾಸಗಿಯಾಗಿ 50 ಮಂದಿ ಹಾಗೂ ಪುನಾರಾವರ್ತಿತ 6 ಮಂದಿ ಪರೀಕ್ಷೆ ಬರೆಯಲು ನೋಂದಾವಣೆ ಮಾಡಿದ್ದು ಅವರಿಗೆ ಪುತ್ತೂರು ಪರೀಕ್ಷಾ ಕೇಂದ್ರವಾಗಿರುತ್ತದೆ. 6 ಪರೀಕ್ಷಾ ಕೇಂದ್ರಗಳು: ಈ ಬಾರೀ ತಾಲೂಕಿನಲ್ಲಿ 6 ಎಸ್ಎಸ್ಎಸ್ಸಿ ಪರೀಕ್ಷಾ ಕೆಂದ್ರಗಳನ್ನು ತೆರೆಯಲಾಗಿದೆ. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ 404 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಇಲ್ಲಿಯ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರು ಹಾಗೂ ಉಪ ಮುಖ್ಯ ಅಧೀಕ್ಷಕರಾಗಿ ಗಾಂಧಿನಗರ ಕೆ.ಪಿ.ಎಸ್. ಸಹ ಶಿಕ್ಷಕ ಚಿನ್ನಪ್ಪ ಗೌಡ ಪತ್ತುಕುಂಜ ಕಾರ್ಯ ನಿರ್ವಹಿಸಲಿದ್ದಾರೆ. ಗಾಂಧಿನಗರ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿ 218 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇಲ್ಲಿಯ ಮುಖ್ಯ ಅಧೀಕೃಕರಾಗಿ ಗಾಂಧಿನಗರ ಕಾಲೇಜಿನ ಹಿರಿಯ ಸಹ ಶಿಕ್ಷಕ ಅರುಣ್ ಕುಮಾರ್ರನ್ನು ನೇಮಕಗೊಳಿಸಲಾಗಿದೆ. ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಗೋಪಿನಾಥ ಮೆತ್ತಡ್ಕ ಮುಖ್ಯ ಅಧೀಕ್ಷಕರಾಗಿರುತ್ತಾರೆ. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 346 ಮಂದಿ ಪರೀಕ್ಷೆ ಬರೆಯಲಿದ್ದು ಕಾಲೇಜಿನ ಉಪ ಪ್ರಾಶುಂಪಾಲೆ ಉಮಾ ಕುಮಾರಿ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನರ್ವಹಿಸುವರು. ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪ. ಪೂ. ಕಾಲೇಜಿನಲ್ಲಿ 426 ಮಂದಿ ಪರೀಕ್ಷೆ ಬರೆಯಲಿದ್ದು ಇಲ್ಲಿ ಮುಖ್ಯ ಶಿಕ್ಷಕ ಯಶವಂತ ರೈಯವರು ಮುಖ್ಯ ಅಧೀಕ್ಷಕರಾಗಿ ಹಾಗೂ ಉಪ ಮುಖ್ಯ ಅಧೀಕ್ಷಕರಾಗಿ ಎಡಮಂಗಲ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಕಜ್ಜೋಡಿ ಕಾರ್ಯ ನಿರ್ವಹಿಸುವರು. ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ 198 ಮಂದಿ ಪರೀಕ್ಷೆ ಬರೆಯಲಿದ್ದು ಅರಂತೋಡು ಪ.ಪೂ. ಕಾಲೇಜಿನ ಮುಖ್ಯ ಶಿಕ್ಷಕ ಸೀತಾರಾಮರು ಮುಖ್ಯ ಅಧೀಕ್ಷಕರಾಗಿರುತ್ತಾರೆ.
1ಕೊಠಡಿಯಲ್ಲಿ 24ವಿದ್ಯಾರ್ಥಿಗಳು: ಎಸ್.ಎಸ್.ಎಲ್.ಸಿ. ಪರೀಕ್ಷೆ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭಗೊಳ್ಳುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹಾಗೂ ತಾಲೂಕಿನ ಪರೀಕ್ಷಾ ನೋಡೆಲ್ ಆಗಿರುವ ಶಿಕ್ಷಣ ಸಂಯೋಜಕಿ ಶ್ರೀಮತಿ ನಳಿನಿ ಪುರುಷೋತ್ತಮ ಕಿರ್ಲಾಯರವರು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಉಪ ಮುಖ್ಯಾಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಸ್ಥಾನಿಕ ನಿರೀಕ್ಷಕರು, ಮೊಬೈಲ್ ಸ್ವಾಧೀನಾಧಿಕಾರಿಗಳು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು ಇರುತ್ತಾರೆ.
- Thursday
- November 21st, 2024