Ad Widget

ಎ.೧-೨: ಕುಂಚಡ್ಕ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

. . . . . . . . .

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಎ.೧ ಮತ್ತು ೨ ಕುಂಚಡ್ಕದ ಒತ್ತೆಕೋಲ ಮಜಲಿನಲ್ಲಿ ನಡೆಯಲಿರುವುದು. ಎ.೧ ರಂದು ಬೆಳಗ್ಗೆ ಗಣಪತಿ ಹವನ ಶುದ್ಧಿ ಕಲಶವಾಗಿ ಮೆಲೇರಿಗೆ ಅಗ್ನಿ ಕುಂಡ ಜೋಡಣೆಯ ಕಾರ್ಯ ಕುತ್ತಿಕೋಲು ತಂಬುರಾಟ್ಟಿ ಭಗವತಿ ಕ್ಷೇತ್ರದ ತೀಯ ಸಮಾಜ ಬಾಂಧವರಿಂದ ನಡೆಯಲಿರುವುದು. ರಾತ್ರಿ ವಯನಾಟ್ ಕುಲವನ್ ದೈವಸ್ಥಾನದಿಂದ ಭಂಡಾರ ಆಗಮಿಸಿ ಮೆಲೇರಿಗೆ ಅಗ್ನಿ ಸ್ಪರ್ಶವಾಗಲಿದೆ. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಮರುದಿನ ಪ್ರಾತಃಕಾಲ ಶ್ರೀವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶವಾಗಲಿದೆ. ಬಳಿಕ ಭಕ್ತಾದಿಗಳಿಂದ ಹರಕೆ ಸಮರ್ಪಣೆ ಮತ್ತು ಪ್ರಸಾದ ವಿತರಣೆಯಾಗಿ ಮಾರಿಕಳ ಪ್ರವೇಶ ನಡೆಯಲಿರುವುದು. ರಾತ್ರಿ ೮.೩೦ರಿಂದ ಖ್ಯಾತ ಗಾಯಕರಿಂದ ಸಂಗೀತ ರಸಮಂಜರಿ ಹಾಗೂ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿರುವುದು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದಾಗಿ ಒತ್ತೆಕೋಲ ಸಮಿತಿ ಆಡಲ್ತೆದಾರ ತೀರ್ಥಕುಮಾರ್ ಕುಂಚಡ್ಕರವರು ತಿಳಿಸಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading