ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿರುವ ಹಿಂದೂಸ್ತಾನೀ ತಬಲ ಜ್ಯೂನಿಯರ್ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ, ಸುಳ್ಯ ರಂಗಮನೆಯ ಮನುಜ ನೇಹಿಗ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾನೆ.
ಯಕ್ಷಗಾನ,ನಾಟಕ,ಜಾದೂ,ಹಾರ್ಮೋನಿಯಂ,ತಬಲ,ಮಣಿಪುರಿ ಸ್ಟಿಕ್ ಡ್ಯಾನ್ಸ್ ಇತ್ಯಾದಿಯಾಗಿ ಬಹುಮುಖ ಪ್ರತಿಭೆ ಹೊಂದಿರುವ ಈತ ಆರಂಭದಲ್ಲಿ ಆಳ್ವಾಸ್ ನಲ್ಲಿ ತಬಲ ಶಿಕ್ಷಕರಾಗಿದ್ದ ದಯಾನಂದ ಧಾರವಾಡ ಮತ್ತು ಪ್ರಸ್ತುತ ವಿದ್ವಾನ್ ವಿನೋದ್ ಕೆ.ಆರ್. ಇವರಿಂದ ತಬಲ ಅಭ್ಯಾಸ ಮಾಡುತ್ತಿದ್ದಾನೆ. ಕಳೆದ ವರ್ಷ ತಾನೇ ಹಿಂದೂಸ್ತಾನೀ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದಿದ್ದ ನೇಹಿಗ ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ರೂವಾರಿ ಡಾ|| ಜೀವನ್ ರಾಂ ಸುಳ್ಯ ಮತ್ತು ಡಾ| ಮೌಲ್ಯ ಜೀವನ್ ದಂಪತಿಗಳ ಮಗನಾಗಿದ್ದಾನೆ. ಈತನನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವರು ಅಭಿನಂದಿಸಿದ್ದಾರೆ.
- Thursday
- November 21st, 2024