ಹೊರಗಿನವರನ್ನು ಕೆಲಸಕ್ಕೆ ಸೇರಿಸುವಾಗ ದಾಖಲೆ ಪಡೆದುಕೊಳ್ಳಿ, ಸೈಬರ್ ಕ್ರೈಂ ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎಂದು ಎಸ್.ಐ. ದಿಲೀಪ್ ಅವರು ಹೇಳಿದರು.
ಸುಳ್ಯ ಪೊಲೀಸ್ ಠಾಣೆಯಲ್ಲಿ ನಡೆದ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು ಮಾನವ ಸಂಬಂಧಗಳು ದೂರವಾಗುವುದರಿಂದ ಹಣ, ಭೋಗ ಜೀವನದ ಆಮಿಷದಿಂದಾಗಿ ಸೈಬರ್ ಕ್ರೈಂ ಗಳು ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ತಾಲೂಕು ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ನಿವೃತ್ತ ಪ್ರಾoಶುಪಾಲ ದಾಮೋದರ ಗೌಡ, ಸಮರ್ಪಣಾ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ಟೀಚರ್,ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಉಮ್ಮರ್ ಕುರುಂಜಿಗುಡ್ಡೆ, ಲ| ರಾಮಚಂದ್ರ ಮುಳ್ಯ, ನಿವೃತ್ತ ಆರೋಗ್ಯ ಸಿಬ್ಬಂದಿ ಹೊಳ್ಳ, ಮೊದಲಾದದವರು ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಪಿಂಚಣಿದಾರರ ಸಂಘದ ಅಧ್ಯಕ್ಷ ಡಾಕ್ಟರ್ ರಂಗಯ್ಯ, ಬೆಳ್ಯಪ್ಪ ಗೌಡ ಬಿ., ಬಾಪು ಸಾಹೇಬ್, ಚೆನ್ನಕೇಶವ ಜಾಲ್ಸೂರು, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಆರಂತೋಡು, ಉಬೆದುಲ್ಲಾ ಕಟ್ಟೆಕ್ಕಾರ್, ದೇವಿದಾಸ್, ಕೇಶವ ಮಾಸ್ಟರ್, ರೋಟೆರಿಯನ್ ಲಿಂಗಪ್ಪ ಗೌಡ, ವೈ. ಕೆ. ರಮಾ ಮೊದಲಾದರು ಭಾಗವಹಿಸಿದ್ದರು. ಎಎಸ್ಐ ತಾರನಾಥ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
- Saturday
- November 23rd, 2024