ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರಾದ ಲ| ಸಂಜೀತ್ ಕುಮಾರ್ ಶೆಟ್ಟಿ ಅವರ ಅಧಿಕೃತ ಭೇಟಿ ಕಾರ್ಯಕ್ರಮವು ಮಾ.17 ರಂದು ಸುಬ್ರಹ್ಮಣ್ಯದ ಮಹಾಮಾಯ ರೆಸಿಡೆನ್ಸಿ ಯಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರಾದ ಲ| ಸಂಜೀತ್ ಕುಮಾರ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷರಾದ ಲ| ಸಂಧ್ಯಾ ಸಂಜೀತ್ ರೈ, ಎಂ.ಸಿ.ಸಿ ಲ| ವಸಂತ್ ಕುಮಾರ್ ಶೆಟ್ಟಿ, ದ್ವಿತೀಯ ವಿ.ಡಿ.ಜಿ ಲ| ಎಂ.ಬಿ ಭಾರತಿ, ಚೀಫ್ ಎಕ್ಸ್ ಟೆಂಕ್ಷನ್ ಆಫೀಸರ್ ಲ| ಜಯರಾಮ್ ದೇರಪ್ಪಜ್ಜನ ಮನೆ, ವಲಯಾಧ್ಯಕ್ಷರಾದ ಲ| ಡಾ.ಸಿದ್ದಲಿಂಗ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಕಾರ್ಯದರ್ಶಿ ಲ| ಸತೀಶ್ ಕೂಜುಗೋಡು, ಖಜಾಂಜಿ ಲ| ರಾಮಚಂದ್ರ ಪಳಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಅವರು ಸ್ವಾಗತಿಸಿದರು. ಲ| ಸತೀಶ್ ಕೂಜುಗೋಡು ವಾರ್ಷಿಕ ವರದಿ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಅಮರ ಸುದ್ದಿ ಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಅವರನ್ನು ಸನ್ಮಾನಿಸಲಾಯಿತು.
ಬೆಂಡೋಡಿ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕ ಹಾಗೂ ಊಟದ ತಟ್ಟೆಯ ಸ್ಟ್ಯಾಂಡ್, ಬಾಳುಗೋಡು ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ, ದೇವರಗದ್ದೆ ಅಂಗನವಾಡಿಗೆ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಲಾಯಿತು. ಯುವ ತೇಜಸ್ಸು ಟ್ರಸ್ಟ್ ಗೆ 33 ಸಾವಿರ ಹಾಗೂ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರ ನಿಧಿಗೆ 20 ಸಾವಿರ ರೂಪಾಯಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ನವೀನ್ ಶೆಟ್ಟಿ ಹಾಗೂ ಶ್ರೀಮತಿ ಸ್ವಾತಿ ದಿನೇಶ್ ಇವರುಗಳು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಗುತ್ತಿಗಾರು, ಪಂಜ, ಕಡಬ, ಸುಳ್ಯ, ಸಂಪಾಜೆ, ಕೊಪ್ಪ ಹಾಗೂ ಮಂಗಳೂರಿನ ಲಯನ್ಸ್ ಕ್ಲಬ್ ನ ಸದಸ್ಯರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು ಉಪಸ್ಥಿತರಿದ್ದರು. ಲ| ವಿಮಲಾ ರಂಗಯ್ಯ ಕಾರ್ಯಕ್ರಮ ನಿರೂಪಿಸಿದರು, ಲ| ರಾಮಚಂದ್ರ ಪಳಂಗಾಯ ಧನ್ಯವಾದ ಸಮರ್ಪಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
- Thursday
- November 21st, 2024