
ಸುಳ್ಯ ತಾಲೂಕಿನ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್, ಗ್ರಾಮ ಪಂಚಾಯತ್ ಗುತ್ತಿಗಾರು ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇವರ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಗುಂಡಡ್ಕ ಕಾಲನಿಯಲ್ಲಿ ನಡೆಯಿತು.
ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಮುಕುಂದ ಕಾರ್ಯಕ್ರಮ ಉದ್ಘಾಟಿಸಿದರು. ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ. ಅಶೋಕ್., ಪ್ರಾರ್ಥಮಿಕ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ಸುರಕ್ಷಾ ಪದ್ಮವೇಣಿ , ಭಾರತಿ, ಅನಿತಾ ಗ್ರಾಮ ಪಂಚಾಯತ್ ಸದಸ್ಯರು, ಅಮೃತ್ ಅಭಿಯಾನದ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲನಿಯ ಐದು ಜನ ತಾಯಂದಿರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ, ಪುಷ್ಪ ಮೇದಪ್ಪ, ಸಂಘಟನಾ ಕಾರ್ಯದರ್ಶಿ ಶಾರದಾ ಡಿ ಶೆಟ್ಟಿ, ಜೊತೆ ಖಜಾಂಜಿ ನಿರ್ದೆಶಕರುಗಳಾದ ವೀಣಾ ಮೋಂಟಡ್ಕ, ಲೋಲಾಕ್ಷಿ ದಾಸನ ಕಜೆ, ರಾಜೀವಿ ಐವ೯ನಾಡು ಉಪಸ್ಥಿತರಿದ್ದ ರು. ಜಯಶ್ರೀ ಪ್ರಾಥಮಿಕ ಸುರಕ್ಷಾ ಅಧಿಕಾರಿ ನೇತ್ರಾವತಿ ಆಶಾ ಕಾರ್ಯಕರ್ತೆ ಭಾಗೀರಥಿ ಕಮಲ ಅಂಗನವಾಡಿ ಕಾರ್ಯಕರ್ತೆ ಕಾರ್ಯಕ್ರಮಕ್ಕೆ ಸಹಕರಿಸಿದ್ದರು . ಟ್ರಸ್ಟ್ ನಿರ್ದೆಶಕಿ ಸವಿತಾ ಕಾಯರ ಕಾರ್ಯಕ್ರಮ ಸಂಯೋಜಿಸಿದರು.