ತೊಡಿಕಾನ ಗ್ರಾಮದ ದೊಡ್ಡಕುಮೇರಿಯಲ್ಲಿ ದೈವಸ್ಥಾನದ ಬ್ರಹ್ಮಕಲಶದ ಬಳಿಕ ಪ್ರಥಮ ಬಾರಿಗೆ ಗುಳಿಗ ದೈವ , ಮೊಗೇರ್ಕಳ ದೈವಗಳು , ತನ್ನಿಮಾನಿಗ ಹಾಗೂ ಕೊರಗ ತನಿಯ ದೈವಗಳ ನೇಮೋತ್ಸವ ಮಾರ್ಚ್ 11 ಮತ್ತು 12 ರಂದು ನಡೆಯಿತು.
ಮಾ. 10 ರಂದು ಹಸಿರುಕಾಣಿಕೆ ನಡೆಯಿತು, ಮಾ. 11 ರಂದು ಬೆಳಿಗ್ಗೆ ಗಣಹೋಮ , ಸ್ಥಳಶುದ್ದಿ , ಶುದ್ದಿಕಲಶ , ಮಹಾಪೂಜೆ ನಡೆಯಿತು. ಸಂಜೆ ಗುಳಿಗ ದೈವದ ನೇಮ ನಡೆದು, ಬಳಿಕ ಸಭಾಕಾರ್ಯಕ್ರಮ , ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮೊಗೇರ್ಕಳ ದೈವಗಳ ನೇಮೋತ್ಸವ , ಪೂಜಾರಿಗಳ ದರ್ಶನ , ಬಳಿಕ ತನ್ನಿಮಾನಿಗ ನೇಮ ನಡೆಯಿತು. ಮಾ. 12 ರಂದು ಮುಂಜಾನೆ ಕೊರಗಜ್ಜ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು.
ಊರ ಹಾಗೂ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಗಂಧ ಪ್ರಸಾದ ಸ್ವೀಕರಿಸಿದರು.