ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಸದಸ್ಯರಾದ ಮುತ್ತಪ್ಪ ಪೂಜಾರಿ, ಶ್ರೀಮತಿ ಕಮಲ ನಾಗಪಟ್ಟಣ,ಮೀನಾಕ್ಷಿ ಆಲೆಟ್ಟಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕರುಣಾಕರ ಹಾಸ್ಪಾರೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದಿನೇಶ್ ಕೋಲ್ಚಾರು, ಸದಸ್ಯರಾದ ಸುಧಾಮ ಆಲೆಟ್ಟಿ, ರಾಧಾಕೃಷ್ಣ ಕೋಲ್ಚಾರು, ಪ್ರಮುಖರಾದ ತೀರ್ಥಕುಮಾರ್ ಕುಂಚಡ್ಕ, ಜಯಪ್ರಕಾಶ್ ಕುಂಚಡ್ಕ, ಇನ್ನಿತರರು ಉಪಸ್ಥಿತರಿದ್ದರು.
- Thursday
- November 21st, 2024