ಜಟ್ಟಿಪಳ್ಳ ಕೊಡಿಯಾಲಬೈಲ್ ದುಗಲಡ್ಕ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 50 ಲಕ್ಷ ರೂಗಳ ಕಾಮಗಾರಿ ನಡೆದಿದ್ದು ವಿವಿಧ ಮೂಲಗಳಿಂದ ಇನ್ನೂ 65 ಲಕ್ಷ ರೂಗಳ ಕಾಮಗಾರಿಗಳಿಗೆ ಮಂಜೂರಾತಿ ದೊರಕಿದ್ದು ಶೀಘ್ರದಲ್ಲಿಯೇ ಈ ಕಾಮಗಾರಿಯು ಆರಂಭಗೊಳ್ಳಲಿದೆ
ಈ ಹಿಂದೆ ಪ್ರತಿಭಟನೆ ನಡೆದಿದ್ದ ಸಂದರ್ಭದಲ್ಲಿ 50 ಲಕ್ಷ ರೂಗಳ ಕಾಮಗಾರಿಯನ್ನು ತಕ್ಷಣ ಕೈಗೊತ್ತಿಕೊಳ್ಳಲಿದ್ದು ಇನ್ನೂ 50 ಲಕ್ಷ ರೂಗಳ ಕಾಮಗಾರಿಯನ್ನು ಮಾಡಲಿದ್ದೇವೆ ಎಂದು ಭರವಸೆ ನೀಡಲಾಗಿತ್ತು. ಇದೀಗ ಮಳೆ ಹಾನಿ ದುರಸ್ತಿ ಯೋಜನೆಯಲ್ಲಿ 25 ಲಕ್ಷ ರೂ, ಲೋಕೋಪಯೋಗಿ ಇಲಾಖೆಯಿಂದ 25 ಲಕ್ಷ ರೂ ಮಂಜುರಾಗಿದ್ದು ಈ ಎರಡು ಕಾಮಗಾರಿಗಳು ಶೀಘ್ರವೇ ಆರಂಭಗೊಳ್ಳಲಿದೆ. ಇದಲ್ಲದೆ ಸರಕಾರಿ ಕಾಲೇಜಿನಿಂದ ಮುಖ್ಯರಸ್ತೆಯ ತನಕ 15 ಲಕ್ಷ ರೂಗಳ ಅಂದಾಜು ವೆಚ್ಚದಲ್ಲಿ ಹಾನಿಯಾದ ರಸ್ತೆಗೆ ನಗರ ಪಂಚಾಯತಿ ವತಿಯಿಂದ ಮರುಡಾಮರೀಕರಣ ನಡೆಸಲಾಗುವುದು. ಅದರಿಂದ ನಾಯಕರು ಕೊಟ್ಟ ಭರವಸೆಯಂತೆ ನಡೆದುಕೊಳ್ಳಲಿಲ್ಲ ಅನ್ನುವುದು ಸರಿಯಾದ ಮಾತಲ್ಲ. ಈ ರಸ್ತೆಗೆ ಈ ಮೊದಲು 50 ಲಕ್ಷ ರು ಹಾಗೂ ಇದೀಗ 65 ಲಕ್ಷ ರೂ, ಒಟ್ಟು 1.15 ಲಕ್ಷ ರೂಗಳ ಕಾಮಗಾರಿಯು ಈ ವರ್ಷ ನಡೆಯುತ್ತಿದ್ದು, ಪ್ರತಿಭಟನೆಯ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಾಗಿದೆ. ಅಲ್ಲದೆ ಸಂಪೂರ್ಣ ಎಂಟು ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಮಾಡುವವರೇ ನಾವು ಬದ್ಧರಾಗಿದ್ದು ವಿವಿಧ ರೀತಿಯಲ್ಲಿ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ. ಹಾಗಾಗಿ ಈ ಭಾಗದ ಜನತೆ ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024