ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಮಾ.5 ರಿಂದ ಮಾ.7 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರೋತ್ಸವವು ನಡೆಯಿತು.
ಮಾ.5 ರಂದು ಬೆಳಿಗ್ಗೆ ತೋರಣ ಮುಹೂರ್ತ ಮತ್ತು ಉಗ್ರಾಣ ಪೂಜೆ, ಹಸಿರುವಾಣಿ ಸಮರ್ಪಣೆ ನಡೆಯಿತು. ನಂತರ ಶ್ರೀ ಬೆಳರಂಪಾಡಿ ವನಶಾಸ್ತಾವು ಕ್ಷೇತ್ರದಲ್ಲಿ ಸಾನಿಧ್ಯ ಕಲಶ ಮತ್ತು ಪಂಚಗವ್ಯ, ವಿಶೇಷ ಪೂಜೆ, ಶ್ರೀ ಶಾಸ್ತಾವು ಕ್ಷೇತ್ರದ ನಾಗನಕಟ್ಟೆ ಮತ್ತು ಬೆಟ್ಟತೋಟದ ಚಿತ್ರಕೂಟದಲ್ಲಿ ಸಾನಿಧ್ಯ, ಕಲಶ, ಪಂಚಗವ್ಯ ಮತ್ತು ತಂಬಿಲ ಸೇವೆ ನಡೆದು, ಸಂಜೆ ಊರಿನ ಅಂಗನವಾಡಿ ಮತ್ತು ಶಾಲಾ ಮಕ್ಕಳು ಹಾಗೂ ಗ್ರಾಮದ ಭಕ್ತಾಭಿಮಾನಿಗಳಿಂದ ಸಾಂಸ್ಕೃತಿಕ ವೈವಿಧ್ಯ, ನಂತರ ಲಲಿತ ಕಲಾವಿದರು ಪ್ರಸ್ತುತ ಪಡಿಸುವ ತುಳು ನಾಟಕ ಗರುಡ ಪಂಚೆಮಿ ನಡೆಯಿತು.
ಮಾ.6ರಂದು ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದ ಜರಗಲಿದೆ. ಸಂಜೆ ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಕ್ರಮಗಳು, ಶ್ರೀ ಶಿವ ಸಾನಿಧ್ಯ ಮತ್ತು ಶ್ರೀ ನರಸಿಂಹ ಸಾನಿಧ್ಯ ಕಟ್ಟೆಗಳಲ್ಲಿ ಮಂಡಲ ಬರೆದು ಶಿವ ಪೂಜೆ ಮತ್ತು ನರಸಿಂಹ ದೇವರ ಪೂಜೆ, ಶ್ರೀ ದೇವಾಲಯದಲ್ಲಿ ರಾತ್ರಿ ಪೂಜೆ ನಡೆಯಿತು. ನಂತರ ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮ ನಡೆಯಿತು.
ಮಾ.7 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಸಾನಿಧ್ಯ ಕಲಶ, ಸಾನಿಧ್ಯ ಕಲಶಾಭಿಷೇಕ ಮಹಾಪೂಜೆ, ಶ್ರೀ ದೇವರ ಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಅನ್ನದಂತರ್ಪಣೆ ನಡೆಯಿತು. ರಾತ್ರಿ ಅಲಂಕಾರ ಪೂಜೆ ಮತ್ತು ರಂಗಪೂಜೆ ಹಾಗೂ ಶ್ರೀ ರಕ್ತೇಶ್ವರಿ ದೈವದ ಸಾನಿಧ್ಯದಲ್ಲಿ ದೇವಕ್ರಿಯೆಯಲ್ಲಿ ಕೋಲ ನಡಾವಳಿ ನಡೆಯಿತು.