ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಶ್ರೀ ಆದಿ ಬೈದೇರುಗಳ ಗರಡಿಯಲ್ಲಿ ಮಾ.6.ರಂದು ಶ್ರೀ ಆದಿ ಬೈದೇರುಗಳ ನೇಮೋತ್ಸವವು ಜರುಗಿತು. ರಾತ್ರಿ ಬೈದೇರುಗಳು ಗರಡಿ ಇಳಿದು ದೇವಳಕ್ಕೆ ತೆರಳಿ ಶ್ರೀ ದೇವರಿಗೆ ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಬಳಿಕ ರಂಗ ಸ್ಥಳ ಪ್ರವೇಶ ,ಕಿನ್ನಿದಾರು ಇಳಿದು ರಂಗಸ್ಥಳ ಪ್ರವೇಶ , ಉತ್ಸವ ಜರುಗಿತು.ಪ್ರಸಾದ ವಿತರಣೆ,ರಾತ್ರಿ ಅನ್ನಸಂತರ್ಪಣೆ ನಡೆಯಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣ ಗೌಡ ಕೋರ್ಜೆ,ದಿನೇಶ್ ಗರಡಿ,ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ರಾಮಚಂದ್ರ ಭಟ್,
ಶ್ರೀಮತಿ ಸೌಮ್ಯ ಪಿ ಆರ್, ಶ್ರೀಮತಿ ರೋಹಿಣಿ ಆರ್ನೋಜಿ , ಸಲಹಾ ಸಮಿತಿಯ ಚಂದ್ರಶೇಖರ ಶಾಸ್ತ್ರಿ,ದೇವಳದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ , ದೈವದ ಮಧ್ಯಸ್ಥ ತಿಮ್ಮಪ್ಪ ಗೌಡ ಪುತ್ಯ ಹಾಗೂ ಸೀಮೆಯ ಭಕ್ತರು ಪಾಲ್ಗೊಂಡಿದ್ದರು.
ಶ್ರೀ ದೇವರಿಗೆ ರಂಗ ಪೂಜೆ
ಮಾ.5.ರಂದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ , ಬೀದಿ ನೇಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ಜರುಗಿತು. ರಂಗ ಪೂಜೆ ಬಳಿಕ ಶ್ರೀ ದೇವರ ಬಲಿ ,ದೈವಗಳ ನೇಮ , ಪ್ರಸಾದ ವಿತರಣೆ ,ಅನ್ನಸಂತರ್ಪಣೆ ಜರುಗಿತು. ನವೀಕೃತ ಗೊಂಡ ಮೈದಾನ ದೇವಳದ ಗರಡಿ ಮೈದಾನವನ್ನು ವಿಶಾಲವಾಗಿ ವಿಸ್ತರಿಸಿ ನವೀಕೃತ ಗೊಳಿಸಲಾಗಿದೆ.ಇದರಿಂದ ಬಹಳಷ್ಟು
ವಿಸ್ತಾರವಾದ ಸ್ಥಳಾವಕಾಶ ಆಗಿದೆ. ದೇವಾಲಯಕ್ಕೆ ನೀರಿನ ವ್ಯವಸ್ಥೆ ಅತೀ ಅವಶ್ಯಕವಾಗಿತ್ತು.ಅದಕ್ಕಾಗಿ ಮಾ.6ರಂದು ದೇವಾಲಯದ ಎದುರು ಕೊಳವೆ ಬಾವಿ ಕೊರೆಯಲಾಗಿದ್ದು ಸುಮಾರು 3.5 ಇಂಚು ನೀರು ದೊರೆತ್ತಿದೆ ಎಂದು
ಸಮಿತಿಯವರು ತಿಳಿಸಿದ್ದಾರೆ.