ಉಡುಪಿಯ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿಯಲ್ಲಿ ‘ವಿಶ್ವಕರ್ಮನೆ ನಮೋ ನಮೋ’ ಎಂಬ ಕನ್ನಡ ಭಕ್ತಿಗೀತೆಯು ಬಿಡುಗಡೆಗೊಂಡಿತು.ಮಾ. 2ರಂದು ಈ ಭಕ್ತಿಗೀತೆಯನ್ನು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅಷ್ಟೋತ್ತರ ಶತ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಯವರು ಅಮೃತ ಹಸ್ತದಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿಶ್ವೇಶ್ವರ ಪುರೋಹಿತ ಬೆಳ್ಳಾರೆ ಮತ್ತು ಮಠದ ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಭಕ್ತಿಗೀತೆಗೆ ನಿರಂಜನ ಆಚಾರ್ಯ ಕಡ್ಲಾರುರವರ ಸಾಹಿತ್ಯ, ಮಿಥುನ್ ರಾಜ್ ವಿಶ್ವಕರ್ಮ ವಿದ್ಯಾಪುರರವರ ಸಂಗೀತವಿದೆ. ಗೀತೆಗೆ ಅಂಕಿತಾ ಆಚಾರ್ಯ ಕಡ್ಲಾರು, ಶ್ರವಣ್ ಆಚಾರ್ಯ ತೆಂಕಿಲ ಮತ್ತು ಶ್ರಾವಣಿ ವಿಶ್ವಕರ್ಮ ಬಂಟ್ವಾಳ ಇವರ ಗಾಯನದೊಂದಿಗೆ ವಿಘ್ನೇಶ್ ಆಚಾರ್ಯ ಕಡಬ ಇವರ ಚಿತ್ರೀಕರಣ ಮತ್ತು ಸಂಕಲನವಿದೆ. ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಕಬಕ ಇಲ್ಲಿ ರೆಕಾರ್ಡಿಂಗ್ ಮತ್ತು ಮಾಸ್ಟರ್ ರಿಂಗ್ ಮಾಡಲಾಗಿದೆ.
ಈ ‘ವಿಶ್ವಕರ್ಮನೆ ನಮೋ’ ನಮೋ ಎಂಬ ಭಕ್ತಿ ಗೀತೆಯೂ N A Times ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.