ಅರಂತೋಡು ಅಡ್ತಲೆ ಎಲಿಮಲೆ ರಸ್ತೆ ಅಭಿವೃದ್ಧಿಗಾಗಿ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಸತತ ಹೋರಾಟ ಮಾಡುತ್ತಾ ಬಂದಿದ್ದು ಜನಪ್ರತಿನಿಧಿಗಳ ಭರವಸೆ ಸಂಪೂರ್ಣ ಈಡೇರದಿದ್ದರೇ ಮತ್ತೊಮ್ಮೆ ಹೋರಾಟ ನಡೆಸುತ್ತೇವೆ ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಅರಂತೋಡಿನಿಂದ ಆರಂಭಗೊಂಡು ಕಾಮಗಾರಿ ಮುಗಿದಿದೆ. ಇನ್ನೂ 2 ಕೋಟಿ ರೂ ಅನುದಾನ ಮಂಜೂರುಗೊಂಡಿದ್ದು ಈ ಕಾಮಗಾರಿ ಒಂದು ವಾರದೊಳಗೆ ಆರಂಭವಾಗದಿದ್ದಲ್ಲಿ ನೋಟ ಅಭಿಯಾನದ ಬಗ್ಗೆ ಮನೆ ಮನೆ ಹೋಗಿ ಜಾಗೃತಿ ಮೂಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಚುನಾವಣೆ ಘೋಷಣೆಗೂ ಮೊದಲು ನಮ್ಮ ಬೇಡಿಕೆಯಂತೆ ಅಡ್ತಲೆಯವರೆಗೆ ರಸ್ತೆ ಅಭಿವೃದ್ಧಿ ಆಗದಿದ್ದರೆ ಮುಂಬರುವ ಎಲ್ಲ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಖಜಾಂಜಿ ಓಂಪ್ರಸಾದ್ ಪಿಂಡಿಮನೆ, ಸದಸ್ಯರಾದ ಮೋಹನ್ ಪಂಜದಬೈಲು ಅಡ್ತಲೆ,ಗಿರೀಶ್ ಅಡ್ಕ, ಸದಸ್ಯರಾದ ಕೇಶವ ಮೇಲಡ್ತಲೆ, ಸುಧಾಕರ ಪಿಂಡಿಮನೆ,ಗೌರವ ಸಲಹೆಗಾರ ಶಶಿಕುಮಾರ್ ಉಳುವಾರು ಉಪಸ್ಥಿತರಿದ್ದರು.