ಕರ್ನಾಟಕ ಸರ್ಕಾರ, ಕಂದಾಯ ಇಲಾಖೆ, ಸುಳ್ಯ ತಾಲೂಕು,ಪಂಜ ಹೋಬಳಿ ಪಂಜ ನಾಡ ಕಚೇರಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.4.ರಂದು ನಡೆಯಿತು.
ಕರ್ನಾಟಕ ಸರಕಾರದ ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕಾ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ಎಸ್ ಅಂಗಾರ ರವರು ಉದ್ಘಾಟಿಸಿ ಮಾತನಾಡಿ “ಗ್ರಾಮೀಣ ಪ್ರದೇಶದಿಂದ ರಾಷ್ಟ್ರ ವ್ಯಾಪ್ತಿ ಜನರಿಗೆ ಅತ್ಯವಶ್ಯವಾದ ಯೋಜನೆಗಳು ಮತ್ತು ಅನೇಕ ಅಭಿವೃದ್ಧಿ ಕೆಲಸ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆಗಿರುತ್ತದೆ. ಎಂದು ಹೆಮ್ಮೆಯಿಂದ ನಾವು ಹೇಳಲು ಆಗುತ್ತದೆ.”ಎಂದು ಹೇಳಿದರು. ನೂತನ ಕಟ್ಟಡದ ಕಚೇರಿಯಲ್ಲಿ ಜನರಿಗೆ ಉತ್ತಮ ಸೇವೆಗಳು ದೊರೆಯಲಿ”. ಎಂದು ಅವರು ಶುಭ ಹಾರೈಸಿದರು. “ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಸ್ವ ಉದ್ಯೋಗ ಯೋಜನೆಗೆ ಪ್ರೋತ್ಸಾಹ ನೀಡುತ್ತಿದೆ. ಮೀನು
ಸಾಕಾಣಿಕೆ ಯೋಜನೆಯಿಂದ ಉತ್ತಮ ಆದಾಯ ಗಳಿಸಲು ಅವಕಾಶವಿದೆ.ಅದರ ಸದುಪಯೋಗ ಪಡೆಯಿರಿ” ಎಂದು ಅವರು ವಿವರಿಸಿದರು.ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಹಶೀಲ್ದಾರ್ ಮಂಜುನಾಥ್ , ಉಪತಹಶೀಲ್ದಾರ್ ಚಂದ್ರಕಾಂತ್ ಎಂ ಆರ್,ನಿರ್ಮಿತಾ ಕೇಂದ್ರದ ಇಂಜಿನಿಯರ್ ನವೀತ್ , ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಹಿರಿಯ ವೈದ್ಯರು ಡಾ.ರಾಮಯ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು. ತಹಶೀಲ್ದಾರ್ ಮಂಜುನಾಥ್ ಸ್ವಾಗತಿಸಿದರು.ಉಪತಶೀಲ್ದಾರ್ ಚಂದ್ರಕಾಂತ್ ಎಂ ಆರ್ ಪ್ರಾಸ್ತಾವಿಕ ಗೈದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ವಂದಿಸಿದರು. ನೂತನ ಕಟ್ಟಡವು 18.84 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.ಸಚಿವ ಎಸ್ ಅಂಗಾರ ರವರು ನಾಮಫಲಕ ಅನಾವರಣ ಗೊಳಿಸಿ, ಕಟ್ಟಡವನ್ನು ಉದ್ಘಾಟಿಸಿದರು.ಬಳಿಕ ಸಭಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿದರು.
- Thursday
- November 21st, 2024