Ad Widget

ಬಿಜೆಪಿ ಸರಕಾರಗಳ ಸಾಧನೆಯ ದೃಶ್ಯಾವಳಿ ಒಳಗೊಂಡ ಪ್ರಗತಿ ರಥ ಚಾಲನೆ

. . . . . . . . .

ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಸಾಧನೆ ಮತ್ತು ಜನಪರ ಯೋಜನೆಗಳನ್ನು ಒಳಗೊಂಡ ದೃಶ್ಯಾವಳಿಗಳನ್ನು ಬಿತ್ತರಿಸುವ ಪ್ರಗತಿ ರಥ ವಾಹನಕ್ಕೆ ಮಾ.1ರಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿಯವರು ಸುಳ್ಯದ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲದ ಪ್ರದಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ ಹಾಗೂ ಸುಬೋದ್ ಶೆಟ್ಟಿ ಮೇನಾಲ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ಗುರುದತ್ ನಾಯಕ್, ಪ್ರಗತಿ ರಥ ಯಾತ್ರೆಯ ಸಂಚಾಲಕರದ ಶ್ರೀಕೃಷ್ಣ ಎಂ ಆರ್, ಸಹಸಂಚಾಲಕರಾದ ಮಹೇಶ್ ಕುಮಾರ್ ಮೇನಾಲ, ಯುವ ಮೋರ್ಚಾದ ಪ್ರಭಾರಿಗಳಾದ ಶಿವಾನಂದ ಕುಕುಂಬಳ, ಬಿಜೆಪಿ ಸುಳ್ಯ ಮಂಡಲ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮನುದೇವ್ ಪರಮಲೆ, ಉಪಾಧ್ಯಕ್ಷರಾದ ದಿಲೀಪ್ ಉಪ್ಪಳಿಕೆ, ಕಾರ್ಯದರ್ಶಿಗಳಾದ ಸಿಂಧು ಪ್ರಭು, ಅನಿಲ್ ಕೇರ್ನಡ್ಕ ಉಪಸ್ಥಿತರಿದ್ದರು. ಪ್ರಗತಿ ರಥ ವಾಹನವು ಇಂದಿನಿಂದ ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಗ್ರಾಮ ಗ್ರಾಮಗಳಿಗೆ ಸಂಚರಿಸಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading