Ad Widget

ಮಾ.5-7: ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವರ ವರ್ಷಾವಧಿ ಜಾತ್ರೋತ್ಸವ

. . . . . . .

ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಮಾ.5ರಿಂದ 7 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ.
ಮಾ.5 ರಂದು ಬೆಳಿಗ್ಗೆ ತೋರಣ ಮುಹೂರ್ತ ಮತ್ತು ಉಗ್ರಾಣ ಪೂಜೆ, ಹಸಿರುವಾಣಿ ಸಮರ್ಪಣೆ ನಡೆಯಲಿದೆ. ನಂತರ ಶ್ರೀ ಬೆಳರಂಪಾಡಿ ವನಶಾಸ್ತಾವು ಕ್ಷೇತ್ರದಲ್ಲಿ ಸಾನಿಧ್ಯ ಕಲಶ ಮತ್ತು ಪಂಚಗವ್ಯ, ವಿಶೇಷ ಪೂಜೆ, ಶ್ರೀ ಶಾಸ್ತಾವು ಕ್ಷೇತ್ರದ ನಾಗನಕಟ್ಟೆ ಮತ್ತು ಬೆಟ್ಟತೋಟದ ಚಿತ್ರಕೂಟದಲ್ಲಿ ಸಾನಿಧ್ಯ, ಕಲಶ, ಪಂಚಗವ್ಯ ಮತ್ತು ತಂಬಿಲ ಸೇವೆ ನಡೆಯಲಿದೆ. ಸಂಜೆ ಊರಿನ ಅಂಗನವಾಡಿ ಮತ್ತು ಶಾಲಾ ಮಕ್ಕಳು ಹಾಗೂ ಗ್ರಾಮದ ಭಕ್ತಾಭಿಮಾನಿಗಳಿಂದ ಸಾಂಸ್ಕೃತಿಕ ವೈವಿಧ್ಯ, 8ರಿಂದ ಸಭಾ ಕಾರ್ಯಕ್ರಮ. ನಂತರ ಲಲಿತ ಕಲಾವಿದರು ಪ್ರಸ್ತುತ ಪಡಿಸುವ ತುಳು ನಾಟಕ ಗರುಡ ಪಂಚೆಮಿ ನಡೆಯುವುದು.
ಮಾ.6ರಂದು ಮಧ್ಯಾಹ್ನ ಮಹಾಪೂಜೆ, ಅನ್ನಪ್ರಸಾದ ಜರಗಲಿದೆ. ಸಂಜೆ ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಕ್ರಮಗಳು, ಶ್ರೀ ಶಿವ ಸಾನಿಧ್ಯ ಮತ್ತು ಶ್ರೀ ನರಸಿಂಹ ಸಾನಿಧ್ಯ ಕಟ್ಟೆಗಳಲ್ಲಿ ಮಂಡಲ ಬರೆದು ಶಿವ ಪೂಜೆ ಮತ್ತು ನರಸಿಂಹ ದೇವರ ಪೂಜೆ, ಶ್ರೀ ದೇವಾಲಯದಲ್ಲಿ ರಾತ್ರಿ ಪೂಜೆ ನಡೆಯಲಿದೆ. ನಂತರ ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮ ನಡೆಯಲಿದೆ. ಮಾ.7 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಸಾನಿಧ್ಯ ಕಲಶ, ಸಾನಿಧ್ಯ ಕಲಶಾಭಿಷೇಕ ಮಹಾಪೂಜೆ, ಶ್ರೀ ದೇವರ ಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಅನ್ನಪ್ರಸಾದ ನಡೆಯಲಿದೆ. ರಾತ್ರಿ ಅಲಂಕಾರ ಪೂಜೆ ಮತ್ತು ರಂಗಪೂಜೆ ಹಾಗೂ ಶ್ರೀ ರಕ್ತೇಶ್ವರಿ ದೈವದ ಸಾನಿಧ್ಯದಲ್ಲಿ ದೇವಕ್ರಿಯೆಯಲ್ಲಿ ಕೋಲ ನಡಾವಳಿ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!