ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು, ಪರಿವಾರ ದೈವಗಳ ಮತ್ತು ಪಾಲೆಪ್ಪಾಡಿ ಶ್ರೀ ಪಂಜುರ್ಲಿ ದೈವದ ಹಾಗೂ ದರ್ಖಾಸ್ತು ಉಳ್ಳಾಕ್ಲು,ಅಡ್ಯಂತಾಯ ಕಟ್ಟೆಯ ನವೀಕರಣ ಪ್ರತಿಷ್ಠಾ ಕಲಶವು ಫೆ.23 ರಿಂದ ಫೆ.27 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು. ಫೆ.23 ರಂದು ತಂತ್ರಿಗಳ ಆಗಮನದ ಬಳಿಕ ದೇವತಾ ಪ್ರಾರ್ಥನೆ, ಸ್ವಸ್ತಿಶ್ರೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ಉಗ್ರಾಣ ಮುಹೂರ್ತ,ರಾಕ್ಷಘ್ನಹೋಮ, ವಾಸ್ತುಪೂಜಾ ಬಲಿ, ಪ್ರಕಾರಬಲಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಫೆ.24 ರಂದು ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ,ಬೆಳಿಗ್ಗೆ ಗಂಟೆ 9:05 ರ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಇರ್ವೆರ್ ಉಳ್ಳಾಕ್ಲು ಅಡ್ಯಂತಾಯ,ಪಂಜುರ್ಲಿ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ತಂಬಿಲ ಸೇವೆ,ಮಂಗಳಾರತಿ,ನೈಮಿತ್ತಿಕ ನಿಯಮ ಪ್ರಾರ್ಥನೆ,ಪ್ರಸಾದ ವಿತರಣೆ ನಡೆಯಿತು. ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಫೆ.25 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಸುಭಾಶ್ಚಂದ್ರ ಕಳಂಜ ಧಾರ್ಮಿಕ ಉಪನ್ಯಾಸ ನೀಡಿದರು. ಗ್ರಾ.ಪಂ.ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಸಭಾಧ್ಯಕ್ಷತೆ ವಹಿಸಲಿದ್ದರು. ಉದ್ಘಾಟಕರಾಗಿ ಶ್ರೀಮತಿ ಜ್ಯೋತ್ಸಾ ಪಾಲೆಪ್ಪಾಡಿ, ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಕೆವಿ.ಜಿ.ಐಟಿಐ ಉಪಪ್ರಾಂಶುಪಾಲರಾದ ದಿನೇಶ್ ಮಡ್ತಿಲ ಉಪಸ್ಥಿತರಿದ್ದರು.
ಅಂದು ರಾತ್ರಿ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ರಾತ್ರಿ ಯಕ್ಷಗಾನ ಬಯಲಾಟ ” ಷಣ್ಮುಖ ವಿಜಯ” ಪ್ರದರ್ಶನ ಗೊಂಡಿತು. ಫೆ.26 ರಂದು ಬೆಳಿಗ್ಗೆ ಶ್ರೀ ಉಳ್ಳಾಕ್ಲು ದೈವದ ನೇಮೋತ್ಸವ ನಂತರ ಅಡ್ಯಂತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಿತು. ಫೆ.27 ರಂದು ಪಂಜುರ್ಲಿ ದೈವದ ಭಂಡಾರ ತೆಗೆಯುವುದು, ಪಂಜುರ್ಲಿ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ, ನಂತರ ಗುಳಿಗ ದೈವದ ನೇಮೋತ್ಸವ ನಡೆಯಿತು.