Ad Widget

ಎ ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಹಾಗೂ ಅಚಲ್ ಉಬರಡ್ಕ ಅವರ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಆಲ್ಬಮ್ ಸಾಂಗ್ ಬಿಡುಗಡೆ

. . . . . . . . .

ಎ ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಹಾಗೂ ಅಚಲ್ ಉಬರಡ್ಕ ಅವರ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಹೊಸ ಆಲ್ಬಮ್ ಸಾಂಗ್ ಮೂಡಿಬಂದಿದ್ದು, ಇದರ ಸಂಗೀತವನ್ನು ಅಶ್ವಿನ್ ಬಾಬಣ್ಣ ಮಾಡಿದ್ದು ಶರತ್ ಕೆ.ಎನ್ ಇವರು ಹಾಡಿರುತ್ತಾರೆ. ಈ ಆಲ್ಬಮ್ ಸಾಂಗ್‌ನ ಛಾಯಾಗ್ರಹಣ ಮತ್ತು ಸಂಕಲನವನ್ನು ಪ್ರಸೀದ ಕೃಷ್ಟ ಇವರು ಮಾಡಿದ್ದು, ಈ ಆಲ್ಬಮ್ ಸಾಂಗ್‌ನಲ್ಲಿ ಗುರು ಉಬರಡ್ಕ ಮತ್ತು ಶ್ವೇತಾಲಕ್ಷ್ಮಿ ಕೆ, ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಮಾತ್ರವಲ್ಲದೆ, ರಾಮನಾಥ ಶೆಣೈ, ಜಗತ್ ಶಾಸ್ತ್ರಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಕೀರ್ತನ ಶ್ರೀ ಮಣಿಮುಂಡ ಇವರು ಕಾಸ್ಟ್ಯೂಮ್ ಡಿಸೈನ್ ಮಾಡಿದ ಸಾಂಗ್‌ನ ಚಿತ್ರೀಕರಣ ಪೂರ್ಣಗೊಂಡಿದ್ದು, ಟೈಟಲ್ ಪೋಸ್ಟರನ್ನು ಶಾಂತಿನಗರದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಯು.ಜಿ ರಾಧ ಇವರು ಬಿಡುಗಡೆಗೊಳಿಸಿದ್ದು, ನ.24ರಂದು ಟೀಸರ್ ಬಿಡುಗಡೆಯಾಗಿದ್ದು ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಡಿ.2ರಂದು ಆಲ್ಬಮ್ ಸಾಂಗ್‌ನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಗುರು ಉಬರಡ್ಕ ಅವರ ಸ್ವಗೃಹದಲಿ ‘ಧನರಾಜ್ ಆಚಾರ್’ ಯ್ಯೂಟೂಬ್ ಚಾನಲ್ ಮೂಲಕ ಜನರನ್ನು ನಗಿಸುತ್ತಾ ಕರ್ನಾಟಕದದ್ಯಾಂತ ಚಿರ ಪರಿಚಿತವಾದ ಕುಟುಂಬದವರಾದ ಜಗದೀಶ್ ಆಚಾರ್ಯ, ಕಿಶೋರ್ ಕುಮಾರ್, ರಾಜೇಶ್ ಕಲ್ಲೇಗ, ಸೂರಜ್ ಆಚಾರ್ಯ, ಶ್ರವಣ್ ಕುಮಾರ್ ಅವರು ಬಿಡುಗಡೆ ಮಾಡಿದರು.
ಕಾರ್ಯಕ್ರಮವನ್ನು ಮಂಜುನಾಥ್ ಜೋಡುಕಲ್ಲು ನಿರೂಪಿಸಿ, ಸ್ವಾಗತಿಸಿದರು. ಸಂದೀಪ್ ಎಸ್ ಮಂಚಿಕಟ್ಟೆ ವಂದಿಸಿದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading