ಸುಳ್ಯ: ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ಅ.3 ರಂದು ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಶ್ರೀ ಶಾರದಾ ದೇವಿ ಪೂಜೆ ನೆರವೇರಿತು.
ಬೆಳಗ್ಗೆ ಗಣಪತಿ ಹವನ ನಡೆದ ಬಳಿಕ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಶಾಸ್ತ್ರೀಯ ಸಂಗೀತ ಶಿಕ್ಷಕ ಮಹಾಬಲೇಶ್ವರ ಬೀರ್ಮಕಜೆ ಮತ್ತು ಸುಗಮ ಸಂಗೀತ ಶಿಕ್ಷಕಿ ಶ್ರೀಮತಿ ಸುಮನಾ ಪುತ್ತೂರು ಮತ್ತು ಪೋಷಕರು ದೀಪ ಪ್ರಜ್ವಲಿಸಿದರು.
ಸುಳ್ಯ ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಗಣಪತಿ ಸ್ತುತಿಯೊಂದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಧ್ಯಾಹ್ನ ಭಜನೆ ಮತ್ತು ಮಹಾಮಂಗಳಾರತಿ ಮುಗಿಸಿ ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.
ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಸ್ವಾಗತಿಸಿ, ಲಿಖಿತಾ ಲೋಕೇಶ್ ವಂದಿಸಿದರು.
ಈ ಸಂದರ್ಭದಲ್ಲಿ ಕಲಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು. ಬಾಲಕೃಷ್ಣ ಮೇನಾಲ ತಬಲಾ ವಾದಕರಾಗಿ ಸಹಕರಿಸಿದರು.
ನಂತರ ಕಲಾ ಶಾಲೆಯ ನೃತ್ಯ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.