Ad Widget

ಹರಿಹರ ಪಲ್ಲತ್ತಡ್ಕ :- ಲಯನ್ಸ್ ಕ್ಲಬ್ ವತಿಯಿಂದ ತೇಜಕುಮಾರ್ ಕಜ್ಜೋಡಿ ಮನೆಯವರಿಗೆ ಸಹಾಯಧನ ವಿತರಣೆ. ಸೋಮಶೇಖರ್ ಕಟ್ಟೆಮನೆ ಅವರಿಗೆ ಸನ್ಮಾನ.

. . . . . . . . .

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಆ.12 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ಬರೆ ಜರಿದು ಮನೆ ಕಳೆದುಕೊಂಡ ತೇಜಕುಮಾರ್ ಕಜ್ಜೋಡಿ ಮನೆಯವರಿಗೆ ಲಯನ್ಸ್ ಕ್ಲಬ್ ವತಿಯಿಂದ ಸಹಾಯಧನ ವಿತರಿಸಲಾಯಿತು. ತಾರಾಮತಿ ಕಜ್ಜೋಡಿ ಅವರು ಸಹಾಯಧನ ಸ್ವೀಕರಿಸಿದರು.

. . . . . . .

ಹಾಗೂ ಆ.02 ರಂದು ಹರಿಹರ ಪಲ್ಲತ್ತಡ್ಕದ ಸೇತುವೆಯಲ್ಲಿ ಸಿಲುಕಿದ ಮರಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಆಕಸ್ಮತ್ತಾಗಿ ನೀರಿಗೆ ಬಿದ್ದ ಕ್ರೇನ್ ಚಾಲಕ ಶರೀಫ್ ಎಂಬುವವರನ್ನು ರಕ್ಷಿಸಿದ ಸೋಮಶೇಖರ್ ಕಟ್ಟೆಮನೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಲ| ಪವನ್.ಎಂ.ಡಿ ಪ್ರಾರ್ಥನೆ ನೆರವೇರಿಸಿದರು. ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಲ|ಪ್ರೋ ರಂಗಯ್ಯ ಶೆಟ್ಟಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಅವರು ಮುಖ್ಯ ಅತಿಥಿಗಳಾಗಿದ್ದರು.

ಲಯನ್ಸ್ ಕೋಶಾಧಿಕಾರಿ ಲ|ರಾಮಚಂದ್ರ ಪಳಂಗಾಯ ಸ್ವಾಗತಿಸಿ ಲ|ಸತೀಶ್ ಕೂಜುಗೋಡು ವಂದಿಸಿದರು. ವಿಮಲಾ ರಂಗಯ್ಯ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading