- Thursday
- October 31st, 2024
ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಕಲಾ ಮಂದಿರದಲ್ಲಿ ಸುಳ್ಯ ಕಲ್ಲುಮುಟ್ಲು ನಿವಾಸಿ ದಿ.ಸುಬ್ಬಯ್ಯ ಮಣಿಯಾಣಿ ಯವರ ಪತ್ನಿ ಶ್ರೀಮತಿ ಪುಷ್ಪಾವತಿ ಮಣಿಯಾಣಿ ಕಲ್ಲುಮುಟ್ಲು ರವರು ಆ.19 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಶ್ರದ್ಧಾಂಜಲಿ ಕಾರ್ಯಕ್ರಮ ಆ.30 ರಂದು ನಡೆಯಿತು.ಮೃತರ ಜೀವನಗಾಥೆಯ ಕುರಿತು ಸಾಮಾಜಿಕ ಧುರೀಣ ಲ| ಎಂ.ಬಿ.ಸದಾಶಿವ, ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ...
ಅರಂಬೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ 36 ನೇ ವರ್ಷದ ಶ್ರೀ ಗಣೇಶೋತ್ಸವ ವು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಬೆಳಗ್ಗೆ ಪುರೋಹಿತ ಕೃಷ್ಣ ಭಟ್ ಇಡ್ಯಡ್ಕ ಮತ್ತು ಅಭಿರಾಮ್ ಭಟ್ ಸರಳಿಕುಂಜ ರವರ ನೇತೃತ್ವದಲ್ಲಿ ಗಣಪತಿ ಹವನದೊಂದಿಗೆ ಆರಂಭಗೊಂಡಿತು. ಬಳಿಕ ಗಣಪತಿ ಮೂರ್ತಿಯ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಮಂದಿರದ ಗೌರವಾಧ್ಯಕ್ಷ ಬಿ.ಶ್ರೀಪತಿ...
ಹಳೆಗೇಟು ವಸಂತಕಟ್ಟೆ ವಠಾರದಲ್ಲಿ ಆ.31 ರಿಂದ ಸೆ.2 ರ ತನಕ ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘ ರಿ. ಆಶ್ರಯದಲ್ಲಿ ನಡೆಯಲಿರುವ 39 ನೇ ವರ್ಷದ ಗಣೇಶೋತ್ಸವಕ್ಕೆ ಆ.31 ಚಾಲನೆ ನೀಡಿ ಬೆಳಗ್ಗೆ ಪುರೋಹಿತ್ ನಟರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹೋಮ, ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್,...
ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕಗಳ ಸಹಯೋಗದೊಂದಿಗೆ ಆ.30 ರಂದು ಪಂಚಾಯತ್ ಸಭಾಭವನದಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್ ರಂಗನಾಥ ರವರ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ, ಪುಸ್ತಕ ಪ್ರದರ್ಶನ, ಮಕ್ಕಳು ಬಿಡಿಸಿದ ರಂಗ ರವರ...
ಪದವಿ ಪೂರ್ವ ಶಿಕ್ಷಣ ಇಲಾಖೆ.ದ.ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ, ಸುಳ್ಯ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಆ. 29 ರಂದು ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ, ಹಾಗೂ ಇದೆ ತಂಡದ ದೇವಿಕಾ.ಕೆ...
ಸ..ಹಿ.ಪ್ರಾ.ಶಾಲೆ ಕಲ್ಮಡ್ಕದಲ್ಲಿ ಆ. 29ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ಪಂಜ ಇದರ ವತಿಯಿಂದ ನಡೆದ ಪಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕೆ.ಎಸ್.ಜಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯು ಸಮಗ್ರ ಪ್ರಶಸ್ತಿಯನ್ನು...
ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನ್ಯಕೋಮಿನ ವಿದ್ಯಾರ್ಥಿ ಪ್ರೀತಿಯ ನಾಟಕ ಮಾಡಿ ಲವ್ ಜಿಹಾದ್ ಮಾಡಲು ಯತ್ನಿಸಿದ್ದಾನೆಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆನ್ನಲಾದ ಅದೇ ಕಾಲೇಜಿನ ಏಳು ವಿದ್ಯಾರ್ಥಿಗಳ ವಿರುದ್ಧ ಠಾಣೆಗೆ ದೂರು ಹೋಗಿ ಪ್ರಕರಣ ದಾಖಲಾದ ಘಟನೆ ಆ.30 ರಂದು ವರದಿಯಾಗಿದೆ. ಜಾಲ್ಸೂರು ಗ್ರಾಮದ ಪೈಚಾರ್ ನಿವಾಸಿ ಲತೀಫ್ ಎಂಬವರ ಪುತ್ರ ಮಹಮ್ಮದ್ ಸನೀಫ್...
ಬೆಳ್ಳಾರೆಯ ಪೆಟ್ರೋಲ್ ಪಂಪ್ ಹತ್ತಿರ ಮಣಿಕ್ಕಾರ ಕಾಂಪ್ಲೆಕ್ಸ್ ಎದುರುಗಡೆ ವಿವಿಧ ಪ್ಲಾಸ್ಟಿಕ್ ಸಾಮಾಗ್ರಿಗಳ ಮಳಿಗೆ ಇಂದು ಶುಭಾರಂಭಗೊಂಡಿತು. ಧಾರ್ಮಿಕ ಮುಂದಾಳು, ಉದ್ಯಮಿ ಜಯಂತ ನಡುಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಲಕರಾದ ಯತಿನ್ ಹಾಗೂ ರಂಜನ್ ಸ್ವಾಗತಿಸಿ, ವಂದಿಸಿದರು. ಇಲ್ಲಿ ಎಲ್ಲಾ ತರಹದ ಕೃಷಿಕರಿಗೆ ಬೇಕಾದ ಕೃಷಿ ಸಾಮಾಗ್ರಿಗಳು, ಪಾಲಿಥಿನ್ ಶೀಟ್, ಟಾರ್ಪಲಿನ್ಸ್, ನರ್ಸರಿ ಬ್ಯಾಗ್, ನರ್ಸರಿ...
ವಳಲಂಬೆಯಲ್ಲಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 19 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಇಂದು ಬೆಳಿಗ್ಗೆ ಗಣಪತಿ ಪ್ರತಿಷ್ಠೆಯೊಂದಿಗೆ ಆರಂಭಗೊಂಡಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿ ರವೀಂದ್ರ ಹೊಸೊಳಿಕೆ, ಸ್ಥಾಪಕಾಧ್ಯಕ್ಷ ವೆಂಕಟ್ ದಂಬೆಕೋಡಿ, ಸಂಚಾಲಕ ವೆಂಕಟ್ ವಳಲಂಬೆ, ಗೌರವಾಧ್ಯಕ್ಷ ಸತೀಶ್ ಮೂಕಮಲೆ,...