- Friday
- November 1st, 2024
ಆ.03 ರಂದು ಸಂಜೆ ಸುರಿದ ಭಾರಿ ಮಳೆಗೆ ಅರಂತೋಡು ಗ್ರಾಮದ ಬೆದ್ರುಪಣೆಯಲ್ಲಿನ ಸೇತುವೆಯ ಒಂದು ಬದಿಯ ತಡೆಗೋಡೆ ಮತ್ತು ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಹೊಳೆಯ ಇನ್ನೊಂದು ಬದಿಯ ಹಲವಾರು ಮನೆಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊಳೆ ದಾಟಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಮಸ್ಯೆ ಕೂಡಲೇ ಸ್ಪಂದಿಸಿದ ಅಡ್ತಲೆಯ ನಾಗರಿಕ ಹಿತರಕ್ಷಣಾ...
ವಿಧಿಯ ಆಟ ತುಂಬಾ ಕ್ರೂರ, ಸೂತ್ರಧಾರನ ಆಟ ಘೋರ, ಕೊಚ್ಚಿ ಹೋದ ಬದುಕ ತೀರ, ಮನಸ್ಸು ಆಗಿದೆ ತುಂಬಾ ಭಾರ... ಎಲ್ಲಾ ಇದ್ದ ಊರಿನಲ್ಲಿ ಏನೂ ಇಲ್ಲದಾಗಿದೆ, ಎಲ್ಲಾ ಕೊಚ್ಚಿ ಹೋಗಿದೆ, ಖುಷಿಯು ದೂರವಾಗಿದೆ, ದುಃಖ ಎಲ್ಲೆಡೆ ತುಂಬಿದೆ... ದೂರವಿರುವ ಗಗನದಿಂದ ಘೋರವಾದ ಮಳೆಯು ಸುರಿದು ಬದುಕು ದುಸ್ತರವಾಗಿದೆ, ಈ ಊರೇ ತತ್ತರವಾಗಿದೆ, ಕಣ್ಣೀರೇ ಉತ್ತರವಾಗಿದೆ......
ಆ.4 ರ ಸಂಜೆ ಸುರಿದ ಭಾರಿ ಮಳೆಗೆ ಕಂದ್ರಪ್ಪಾಡಿ ದೇವ ಮಡಪ್ಪಾಡಿ ಸಂಪರ್ಕಿಸುವ ರಸ್ತೆಯ ಕಂದ್ರಪ್ಪಾಡಿ ಎಂಬಲ್ಲಿ ಬರೆ ಕುಸಿದು ರಸ್ತೆಯಲ್ಲಿ ಸಂಚರಿಸಲು ಸಂಕಷ್ಟವಾಗಿದೆ
ವಳಲಂಬೆ ದೇವಸ್ಥಾನದ ಬಳಿಯಿರುವ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಮಳೆಗೆ ಕೊಚ್ಚಿ ಬಂದ ಮರಗಳು ಸಿಲುಕಿ ಹಾನಿಯಾಗಿದೆ. ಮೂರು ಪಿಲ್ಲರ್ ಕೊಚ್ಚಿ ಹೋಗಿದೆ. ಇದರಿಂದ ನೀರು ಬ್ಲಾಕ್ ಆಗಿ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿತ್ತು. ಉಳಿದ ಪಿಲ್ಲರ್ ಗಳಲ್ಲಿ ಸಿಲುಕಿರುವ ಮರಗಳನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಊರವರು ತೆರವುಗೊಳಿಸಿದರು.
ಮೇಘಸ್ಪೋಟದಿಂದ ನಲುಗಿ ಹೋಗಿರುವ ಕಲ್ಮಕಾರು ಕೊಲ್ಲಮೊಗ್ರು ಭಾಗದಲ್ಲಿ ಸೇವಾ ಭಾರತಿ, ವಿಶ್ವಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವೀರಕೇಸರಿ ಮಿತ್ರವೃಂದ ಮಂಡೆಕೋಲು ಮೊದಲಾದ ಸಂಘಟನೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡರು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೂ ಶ್ರಮಸೇವೆ ನಡೆಸಿದರು. ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿರುವಂತೆಯೇ ಪುನಃ ಸುರಿದ ಭಾರಿ ಮಳೆಗೆ ಮೇಲಿನ ಭಾಗದಿಂದ ಅನಿರೀಕ್ಷಿತವಾಗಿ ಹರಿದು ಬಂದ...