ಗೌಡರ ಯುವ ಸೇವಾ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ 75ನೇ ಸ್ವಾಂತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜರುಗಲಿರುವ 1837ರ ಅಮರ ಸುಳ್ಯದ ಸ್ವಾತಂತ್ರ್ಯ ಸಮರ ಬಗ್ಗೆ ವಿಚಾರ ಗೋಷ್ಠಿ ಜು.22 ರಂದು ಸುಳ್ಯದ ಅಂಬಟೆಡ್ಕದಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ.ಎನ್.ಎ. ಜ್ಞಾನೇಶ್ ಹೇಳಿದರು.
ಅವರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿಗಳಾದ ಡಾ. ಪುರುಷೋತ್ತಮ ಬಿಳಿಮಲೆ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಮಂಗಳೂರಿನ ಸಂಶೋಧಕರಡಾ. ಪ್ರಭಾಕರ ನೀರುಮಾರ್ಗ, ಸುಳ್ಯದ ಸಾಹಿತಿ ಡಾ. ಪ್ರಭಾಕರ ಶಿಶಿಲ, ಮಡಿಕೇರಿಯ ವಕೀಲರು ಹಾಗೂ ಸಾಹಿತಿಗಳಾದ ವಿದ್ಯಾದರ ಬಡ್ಡಡ್ಕ , ಸಾಹಿತಿ ಅರವಿಂದ ಚೊಕ್ಕಾಡಿ, ಸಂಶೋದಕ ಹಾಗೂ ಚಿಂತಕರಾದ ಗೋಪಾಲ್ ಪೆರಾಜೆ ಇವರುಗಳು ವಿಚಾರ ಮಂಡನೆಯನ್ನು ಮಾಡಲಿದ್ದಾರೆ ಹಾಗೂ ಗೋಷ್ಠಿಯಲ್ಲಿ ಇತಿಹಾಸ ಸಂಶೋಧಕ ಎ.ಕೆ ಹಿಮಕರ, ಬೆಂಗಳೂರಿನ ಸಂಶೋಧಕ ಅನಂತರಾಜ ಗೌಡ, ಸಾಹಿತಿಗಳಾದ ಡಾ. ಪೂವಪ್ಪ ಕಾಣಿಯೂರು, ಬೆಂಗಳೂರಿನ ಸಂಶೋಧಕ ಪ್ರತಿಮಾ ಜಯರಾಮ, ಸಾಹಿತಿಗಳಾದ ಸಹಾನ ಕಾಂತಬೈಲು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು, ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ವೀರಪ್ಪ ಗೌಡ, ದಿನೇಶ್ ಮಡಪ್ಪಾಡಿ, ಪಿ. ಎಸ್ ಗಂಗಾಧರ ಉಪಸ್ಥಿತರಿದ್ದರು.