ನೂರು ಕಷ್ಟ ದಾಟಿ ಸಾಗಿ ಗೆಲುವು ಪಡೆದುಕೊಂಡೆ ನೀ, ಗೆಲುವು ಪಡೆದ ಸಂತಸದಲಿ ಕಳೆದ ದಿನವ ಮರೆತೆ ನೀ, ಬಂದ ಹಾದಿ ತೊರೆದೆ ನೀ…
ನಿನ್ನ ಗೆಲುವ ಮೆಟ್ಟಿಲಾದ ನಿನ್ನವರ ಮರೆತೆ ನೀ, ನಾನೇ ಎಂಬ ಜಂಭದಲ್ಲಿ ಪ್ರೀತಿ ಸ್ನೇಹ ಮರೆತೆ ನೀ, ಕಳೆದ ಎಲ್ಲಾ ದಿನಗಳನ್ನು ಮರೆತು ಮುಂದೆ ನಡೆದೆ ನೀ…
ಸೋಲೇ ಗೆಲುವ ಮೆಟ್ಟಿಲೆಂಬ ಮಾತನ್ನು ಮರೆತೆ ನೀ, ನಿನ್ನ ಗೆಲುವ ಹಿಂದಿರುವ ಸೋಲುಗಳನು ಮರೆತೆ ನೀ…
ಸೋಲು ಗೆಲುವ ಆಟದಲ್ಲಿ ಬಹು ಎತ್ತರ ಬೆಳೆದೆ ನೀ, ಈ ಗೆಲುವು ಕ್ಷಣಿಕವೆಂಬ ನಿಜವ ತಿಳಿಯದಾದೆ ನೀ…
ಪ್ರತಿಯೊಂದು ಆರಂಭಕ್ಕೂ ಅಂತ್ಯವೊಂದು ಇರುವುದು, ನಿನ್ನ ಗೆಲುವ ಹಾದಿಯಿದು ಸೋಲಿನೆಡೆಗೆ ಸಾಗುವುದು, ಮಿಂಚಿ ಹೋದ ಕಾಲವಿದು ಚಿಂತೆ ಮಾಡಲಾಗದು, ತಿಳಿದುಕೊಂಡು ಬದುಕಿದರೆ ಮತ್ತೆ ಗೆಲುವು ಸಿಗುವುದು, ಅರಿತುಕೊಂಡು ಬದುಕಿದರೆ ಬದುಕು ಗೆಲುವಿನೊಡನೆ ಸಾಗುವುದು…
✍️ಉಲ್ಲಾಸ್ ಕಜ್ಜೋಡಿ