Ad Widget

ಆಟಿ – ಅನಿಷ್ಠವಲ್ಲ

ತುಳುನಾಡು ಎನ್ನುವುದು ಸಾಂಸ್ಕೃತಿಕವಾಗಿ ಸಾಂಪ್ರದಾಯಿಕವಾಗಿ ಏಕತೆಯನ್ನು ಸಾರಿದ ನಾಗ ನಡೆಯ ಪವಿತ್ರ ಭೂಮಿ. ತುಳುನಾಡು ತುಳುವರ ಆಚರಣೆಗಳು ಕೇವಲ ಧರ್ಮಕ್ಕೆ ಸೀಮಿತವಾಗಿರದೆ ಸರ್ವ ಧರ್ಮೀಯರು ಆಚರಿಸುವ ಆಚರಣೆಗಳಾಗಿವೆ, ಆಟಿ ಬಂದಾಗ ಹಿಂದೂ ಮುಸಲ್ಮಾನ ಕ್ರೈಸ್ತ ಎಲ್ಲರೂ ಕೂಡ ಒಂದು ಕಾಲ ಘಟ್ಟದಲ್ಲಿ ಆಚರಿಸದೆ ಅನುಭವಿಸಿದವರು…ಆಟಿ ಬಂದಾಗ ಅಟ್ಟ ಕಾಲಿ ಸೋಣ ಬಂದಾಗ ಪೆಲತಾರಿ ಚೋಲಿ ಎಂಬ ಮಾತಿನಂತೆ ಕಷ್ಟದ ದಿನಗಳನ್ನು ರೋಗ ರುಜುನಗಳೊಂದಿಗೆ ದೂಡಿದವರು. ತಿನ್ನುವ ಹಿಡಿಯಕ್ಕಿಗೆ ಉಳ್ಳವನ ಪಾದ ಸ್ಪರ್ಶಿಸುವ ಸಂದರ್ಭ, ಇಂತಹ ಸನ್ನಿವೇಶದಲ್ಲಿ ಔಷಧೀಯ ಗುಣವುಳ್ಳ ಸೊಪ್ಪು ತೊಗಟೆಗಳನ್ನು ತಿಂದು ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಿಕೊಂಡ… ಕೆಲಸವಿಲ್ಲದೆ ಮಂಕಾಗಿ ದೇಹ ಜಡತ್ವಕ್ಕೆ ಹೋಗದ ರೀತಿಯಲ್ಲಿ ಅಟ್ಟದ ಚೆನ್ನೆಮಣೆ ಯ ಕೆಳಗೆ ಇಳಿಸಿ ಆಟದ ಮೋಜಿನಲ್ಲಿ ಜಡತ್ವ ದೂರ ಸರಿಸಿದ. ಕಷ್ಟದ ದಿನಗಳನ್ನು ನಮ್ಮ ಹಿರಿಯರು ಅನಿಷ್ಠದ ದಿನವೆಂದು ನಾಮದೇಯ ಕಟ್ಟಿದರು ಹೊರತು… ಹುಟ್ಟು, ಸಾವಿಗೆ, ಮಾರಾಟ, ಖರೀದಿಗೆ ಯಾವುದೇ ಸಂಬಂಧವಿಲ್ಲ. ಜನರ ನಂಬಿಕೆಯಲ್ಲಿ ಇರತಕ್ಕಂತ ಮೂಡನಂಬಿಕೆ ಎಂದರೆ ಆಟಿ ತಿಂಗಳಲ್ಲಿ ಸಾವು ಬಂದರೆ ಅಥವಾ ಹುಟ್ಟು ಆದರೆ ಸ್ವರ್ಗದ ಬಾಗಿಲು ಮುಚ್ಚಿರುತ್ತದೆ ಎನ್ನುವಂತಹ ಮಾತು. ತುಳುವರ ಪರಂಪರೆ ಇತಿಹಾಸವನ್ನು ಶೋಧಿಸಿದಾಗ ಸ್ವರ್ಗ ಎನ್ನುವ ಪರಿಕಲ್ಪನೆ ತುಳುವರಲ್ಲಿ ಇಲ್ಲ ಹಾಗೆಯೇ ತುಳುವರ ನಂಬಿಕೆಯ ಪ್ರಕಾರ ಸತ್ತ ವ್ಯಕ್ತಿ 11ನೇ ದಿವಸ ಶುದ್ಧ ಮಂಡಲವಾಗಿ ತಾನು ವಾಸಿಸಿದ ಮನೆಗೆ ಬಂದು ಉಪಚಾರ ಸ್ವೀಕರಿಸುವ ಕ್ರಮವಿದೆ ನಂತರ 16ನೆಯ ದಿವಸ 16 ಅಗೆಲ್ ಹಾಕಿ ಸೇರಿಸುವ ಕ್ರಮವಿದೆ ಇದರ ಅರ್ಥ ಸತ್ತ ವ್ಯಕ್ತಿಗಿಂತ ಹಿರಿಯವರು ಅನೇಕರು ಸತ್ತಿರುತ್ತಾರೆ ಅಂತಹ ವ್ಯಕ್ತಿಗಳ ಆತ್ಮದ ಜೊತೆ ಸೇರಿಸುವ ಕ್ರಮ ಈ ಕ್ರಮದ ಪ್ರಕಾರ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಹೇಳುವ ಒಂದು ಕ್ರಮವಿದೆ. ಅದು ಏನೆಂದರೆ ಇನ್ನು ಮುಂದೆ “ಯಾವುದೇ ಧರ್ಮ ಕಾರ್ಯ ನಡೆಯುವ ಸಂದರ್ಭ ಮಾಯಾಶಕ್ತಿಗಳಾಗಿ ನಮಗೆ ಬುದ್ಧಿ ನೀತಿ ನೀಡಿ ಕತ್ತಲೆಯ ದಾರಿಯಲ್ಲಿ ಬೆಳಕಾಗಿ ನಿಲ್ಲಿ” ಎನ್ನುವ ಮಾತು ಈ ಎಲ್ಲಾ ವಿಚಾರಧಾರೆಗಳನ್ನು ಅವಲೋಕಿಸುತ್ತ ಹೋದಾಗ ಆಟಿಯಲ್ಲಿ ಸತ್ತ ವ್ಯಕ್ತಿ ಹುಟ್ಟಿದ ಮಗು ಅನಿಷ್ಟಕಾರಕವಲ್ಲ ಸರಿ ನೋಡಿದಾಗ ಎಷ್ಟೋ ಮೇಧಾವಿಗಳು ಧರ್ಮಿಸ್ಟರು ಹುಟ್ಟಿದ್ದು, ತೀರಿದ್ದು ಇದೇ ತಿಂಗಳಲ್ಲಿ…
ಆದ್ದರಿಂದ ಅಂದಿನ ಆ ಕಾಲಘಟ್ಟದಲ್ಲಿ ಆಟಿಯ ದಿನಗಳು ಕಷ್ಟವಿದ್ದುದರಿಂದ ಅನಿಷ್ಟ ದಿನಗಳಾಯಿತು. ಈಗ ಪರಿಸ್ಥಿತಿ ಬದಲಾಗಿದೆ ಉಡುವ ಬಟ್ಟೆಗೆ,ತಿನ್ನುವ ತಿನಸಿಗೆ ತುಳುನಾಡಿನ ಸರ್ವರಿಗೂ ಯಾವುದೇ ಕೊರತೆ ಇಲ್ಲ. ಕೊರತೆಯಾಗುವಂತೆ ನಮ್ಮ ನಂಬಿಕೆಯ ಆಧಾರದಲ್ಲಿ ಮೆರೆಯುವಂತಹ ದೈವಗಳು ಮಾಡಲಿಲ್ಲ. ಆದ್ದರಿಂದ ತುಳು ನಾಡಿನ ಆಟಿಯ ದಿನಗಳನ್ನು ಆಚರಿಸುವ.. ವಾತಾವರಣದ ವೈಪರಿತ್ಯಕ್ಕೆ ತಡೆಗೋಡೆಯಾಗಿ ನಿಲ್ಲುವ ನಮ್ಮ ಹಿರಿಯವರ ಮದ್ದು ಮಾಯಗವ ಸ್ವೀಕರಿಸುವ.

ಅಜಿತ್ ಗೌಡ ಐವರ್ನಾಡು
ಮಧ್ಯಸ್ಥರು, ಅಧ್ಯಾಪಕ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!