ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಂಪಾಜೆ ಸುಳ್ಯ ಇವರ ಆಶ್ರಯದಲ್ಲಿ ಮೇ.5 ರಂದು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕೊಡಗು ಕೆನರಾ ಬಂಡಾಯ 1837 ಕೃತಿ ಲೋಕಾರ್ಪಣೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ, ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಸುಳ್ಯದ ಕನ್ನಡ ಭವನ ಅಂಬೆಟಡ್ಕದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಂಬಯಿ ವಿ.ವಿ. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಸಂತಕುಮಾರ ತಾಳ್ತಜೆ ಕೃತಿ ಬಿಡುಗಡೆ ಮಾಡಿದರು.
ಸಂಸ್ಥಾಪನಾ ದಿನಾಚರಣೆ ಉಪನ್ಯಾಸವನ್ನು ವಿಶ್ರಾಂತ ಪ್ರಾಧ್ಯಾಪಕಿ ಲೀಲಾ ದಾಮೋದರ ನಡೆಸಿದರು.
ಜಿ.ಎಸ್. ಉಬರಡ್ಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಕೃತಿಕಾರ ಡಾ. ಬಿ. ಪ್ರಭಾಕರ ಶಿಶಿಲ, ಸುಳ್ಯದ ಸಂಪಾಜೆ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷರು ಡಾ. ಉಮ್ಮರ್ ಬೀಜದಕಟ್ಟೆ , ಕೋಶಾಧಿಕಾರಿ ದಯಾನಂದ ಆಳ್ವಾ ಉಪಸ್ಥಿತಿ ವಹಿಸಿದ್ದರು.
ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಸ್ವಾಗತಿಸಿ, ಶರೀಫ್ ಜಟ್ಟಿಪಳ್ಳ ವಂದಿಸಿದರು. ಚಂದ್ರಮತಿ ಕೆ. ನಿರೂಪಿಸಿದರು.