Ad Widget

ಸವಣೂರು : ಅಮರ ಸಂಘಟನಾ ಸಮಿತಿ ವತಿಯಿಂದ ಮನೆ ಹಸ್ತಾಂತರ

ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಕಡಬ ತಾಲೂಕಿನ ಸವಣೂರು ಸಮೀಪದ ಮಾಂತೂರು ಶ್ರೀಮತಿ ಶ್ಯಾಮಲರಿಗೆ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪಂಚಾಯತ್ ನಿವೇಶನದಲ್ಲಿ ನೂತನವಾಗಿ ೨.೫೩ಲಕ್ಷ ದಲ್ಲಿ ನಿರ್ಮಿಸಿದ ಅಮರ ಜ್ಯೋತಿ ಮನೆಯ ಹಸ್ತಾಂತರ ಕಾರ್ಯಕ್ರಮ ಎ. ೧೦ರಂದು ನಡೆಯಿತು.

. . . . . . . . .

ಗಣಪತಿ ಹವನದ ಮೂಲಕ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಉದ್ಘಾಟಿಸಿದರು. ಕಡಬ ಪೋಲಿಸ್ ಠಾಣೆ ಉಪನಿರೀಕ್ಷಕ ಆಂಜನೆಯ ರೆಡ್ಡಿ ಮನೆ ಹಸ್ತಾಂತರಿಸಿದರು.
ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ರಜನಿಕಾಂತ್ ಉಮ್ಮಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ಳಾರೆ ಪೋಲಿಸ್ ಠಾಣೆಯ ಉಪನಿರೀಕ್ಷಕರಾದ ರುಕ್ಮಾ ನಯಕ್, ಸವಣೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಶ್ರೀಮತಿ ರಾಜೀವಿಶೆಟ್ಟಿ, ಸದಸ್ಯರಾದ ಗಿರಿಶಂಕರ್ ಸುಳ್ಯ, ಶ್ರೀಮತಿ ಯಶೋದ, ಹಾಗೂ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ಇದರ ನಿರ್ದೇಶಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಕಡಬ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿಯವರಿಗೆ ಬೀಳ್ಕೊಡುಗೆ, ಸನ್ಮಾನವನ್ನೂ ಮಾಡಲಾಯಿತು.
ಸಂಘಟನೆಯ ನಿರ್ದೇಶಕರಾದ ಕೇಶವಪ್ರಸನ್ನ ಉಬರಡ್ಕ ಸ್ವಾಗತಿಸಿ, ರಕ್ಷಿತ್ ಉಬರಡ್ಕ ವಂದಿಸಿದರು.
ಸಂಘಟನೆಯ ಉಪಾಧ್ಯಕ್ಷರಾದ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಮನೆ ನಿರ್ಮಾಣ ಕಾರ್ಯಕ್ರಮದಲ್ಲಿ ಅಮರ ಸಂಘಟನೆಯೊಂದಿಗೆ ಊರಿನ ಹಾಗೂ ಪರವೂರಿನ ಹಲವಾರು ದಾನಿಗಳು ಕೈಜೋಡಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading