ಸಂಚಾರಿ ಈ ಬದುಕು ಸಾಗುತಿದೆ ಎಲ್ಲಿಯೂ ನಿಲ್ಲದೇ,
ಏಕಾಂಗಿ ಈ ಬದುಕು ನಿಂತಿದೆ ಸುತ್ತಲೂ ಯಾರಿಲ್ಲದೇ…
ಗೆಲ್ಲುವ ಛಲ ತುಂಬಿದ ಬದುಕು ಸಾಗುತಿದೆ ಸೋತರೂ ಕುಗ್ಗದೇ, ಕಣ್ಣೆದುರು ಸೋಲಿದ್ದರೂ ಜಗ್ಗದೇ…
ಮೌನಿ ಈ ಬದುಕು ಸಾಗುತಿದೆ ಚುಚ್ಚು ಮಾತುಗಳ ಕೇಳಿಯೂ ಕೇಳದಂತೆ, ಅಣಕಿಸುವವರ ನೋಡಿಯೂ ನೋಡದಂತೆ…
ಕನಸು ಕಾಣುವ ಬದುಕು ಸಾಗುತಿದೆ ಕನಸು ನನಸಾಗಿಸಲು, ಬದುಕ ಗುರಿ ಮುಟ್ಟಿಸಲು…
ಸೋಲೇ ತುಂಬಿದ ಬದುಕು ಸಾಗುತಿದೆ ಬದುಕಿನಲ್ಲಿ ಗೆಲ್ಲಲು, ಗೆಲುವಿನ ಗುರಿ ತಲುಪಲು…
ಮನಸ ಮಾತನು ಕೇಳುವ ಈ ಬದುಕು ಮೌನ ತಾಳಿದೆ ಇಂದು, ಸೋಲು ಮರೆತಿದೆ ಇಂದು, ಬದುಕಿನ ಗುರಿ ಹುಡುಕಿ ಸಾಗಿದೆ ಮುಂದೆ…
✍️ಉಲ್ಲಾಸ್ ಕಜ್ಜೋಡಿ