ಆಲೆಟ್ಟಿ ಗ್ರಾಮದ ಸುಳ್ಯ ಪಟ್ಟಣಕ್ಕೆ ಸಮೀಪವಿರುವ ಪ್ರತಿಷ್ಠಿತ ದೇವಸ್ಥಾನ ನಾಗಪಟ್ಟಣ ಶ್ರಿ ಸದಾಶಿವ ದೇವಸ್ಥಾನದಲ್ಲಿ ಎ.೪ ರ ರಾತ್ರಿ ಕಳ್ಳನೊಬ್ಬ ದೇವಾಲಯದ ಹೊರಾಂಗಣದ ಟೇಬಲ್ ನಲ್ಲಿ ಇಟ್ಟಿದ್ದ ಹಣ ಕಳವು ಮಾಡಿರುವ ಬಗ್ಗೆ ವರದಿಯಾಗಿದ್ದು, ಕಳ್ಳತನಕ್ಕೆ ಯತ್ನಿಸುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ಕಳ್ಳನೊಬ್ಬ ರಾಡ್ ಹಿಡಿದು ನಡೆದಾಡುವುದು ಕಂಡುಬಂದಿದೆ. ದೇವಸ್ಥಾನದ ಹೊರಾಂಗಣದಲ್ಲಿ ಟೇಬಲ್ ಇದ್ದು ಇಲ್ಲಿ ದೇವಾಲಯದ ಗುಮಾಸ್ತ ಕಾರ್ಯ ನಿರ್ವಹಿಸುತ್ತಾರೆ. ದಿನ ಪ್ರತಿ ಭಕ್ತಾಧಿಗಳು ಬಂದ ಸಂದರ್ಭದಲ್ಲಿ ಸೇವಾ ರಶೀದಿಗಳನ್ನು ಇಲ್ಲಿ ಮಾಡಲಾಗುತ್ತದೆ , ಆದರೆ ಕಳ್ಳತನ ನಡೆಯುವ ಹಿಂದಿನ ದಿನ ಗುಮಾಸ್ಥ ಟೇಬಲ್ ನಲ್ಲಿ ಇದ್ದ ಹಣವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರ ಸುಪರ್ದಿಗೆ ಒಪ್ಪಿಸಿದ್ದು ಚಿಲ್ಲರೆ ಹಣವಷ್ಟೇ ಟೇಬಲ್ ಡ್ರವರ್ ನಲ್ಲಿ ಬಿಟ್ಟಿದ್ದರು. ಕಳ್ಳ ಡ್ರವರ್ ಮುರಿದು ಕೈಗೆ ಸಿಕ್ಕ ಚಿಲ್ಲರೆ ಹಣವನ್ನು ದೋಚಿ ಪರಾರಿಯಾಗಿದ್ದಾನೆ, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
- Thursday
- November 21st, 2024