ದುಗ್ಗಲಡ್ಕದಲ್ಲಿ ‘ಹಾಸನಾಂಭ ಅಯ್ಯಂಗಾರ್ ಬೇಕರಿ & ಸ್ವೀಟ್ಸ್’ ಶುಭಾರಂಭ

ದುಗ್ಗಲಡ್ಕದ ಮಾರುತಿ ಆರ್ಕೇಡ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ‘ಹಾಸನಾಂಭ ಅಯ್ಯಂಗಾರ್ ಬೇಕರಿ & ಸ್ವೀಟ್ಸ್’ ಮಳಿಗೆಯ ಶುಭಾರಂಭವು ನ.13ರಂದು ಶುಕ್ರವಾರ ಬೆಳಿಗ್ಗೆ ನಡೆಯಿತು. ಶ್ರೀ ದುಗ್ಗಲಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕೆ ಮಳಿಗೆಯನ್ನು ಉದ್ಘಾಟಿಸಿದರು.

. . . . . . . . .

ಕಾರ್ಯಕ್ರಮದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಶ್ರೀ ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ನಗರ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ರೈ ಎ, ಶ್ರೀ ದುಗ್ಗಲಾಯ ದೈವಸ್ಥಾನದ ಮಾಜಿ ಅಧ್ಯಕ್ಷ ಸುಂದರ ರಾವ್ ಕೆ. ಕೊಡೆಂಚಡ್ಕ ಹಾಗೂ ಮಾರುತಿ ಆರ್ಕೇಡ್ ಮಾಲಕ ಲೋಕೇಶ್ ಜಟ್ಟಿಪಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

. . . . . . .

ಬೇಕರಿಯಲ್ಲಿ ವಿವಿಧ ಬಗೆಯ ತಿಂಡಿ-ತಿನಿಸುಗಳು ಹಾಗೂ ಸ್ವೀಟ್ಸ್‌ಗಳು ಲಭ್ಯವಿದ್ದು, ಎಲ್ಲಾ ಸಭೆ-ಸಮಾರಂಭಗಳಿಗೆ ಮಿತದರದಲ್ಲಿ ತಿಂಡಿ ಮತ್ತು ಕೇಕ್‌ಗಳನ್ನು ತಯಾರಿಸಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಸಂತೋಷ್ ಹಾಗೂ ಶ್ರೀಮತಿ ಗಾಯತ್ರಿ ಹೇಳಿದರು. ಮಾರುತಿ ಆರ್ಕೇಡ್ ಮಾಲಕ ಲೋಕೇಶ್ ಜಟ್ಟಿಪಳ್ಳ ಸ್ವಾಗತಿಸಿ, ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading