Ad Widget

ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಬೆಳ್ಳಾರೆಯಲ್ಲಿ ಕೊರೋನಾ ಭೀತಿ ಹಬ್ಬಲು ಕಾರಣ,ಕ್ವಾರಂಟೈನ್ ಕೇಂದ್ರದಲ್ಲಿ ಪಾರ್ಟಿ ನಡೆಸಿದ್ದಾರೆ-ಎಸ್.ಡಿ.ಪಿ.ಐ ಆರೋಪ

ಮಹಾರಾಷ್ಟ್ರದಿಂದ ಬೆಳ್ಳಾರೆ ಆಗಮಿಸಿದ ಸ್ಥಳೀಯ ಯುವಕನಿಗೆ ಕೊರೋನಾ ವರದಿ ಪಾಸಿಟಿವ್ ಬಂದಿದ್ದು, ಇದೀಗ ಇಡೀ ವ್ಯಾಪ್ತಿಯೇ ಸೀಲ್ ಡೌನ್ ಆಗುವ ಭೀತಿ ಕೂಡ ಉಂಟಾಗಿದ್ದು ಇದಕ್ಕೆಲ್ಲಾ ಸುಳ್ಯ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣವೆಂದು ಎಸ್.ಡಿ.ಪಿ.ಐ ಆರೋಪಿಸಿದೆ.
ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯು ಬೆಳ್ಳಾರೆ ಆಗಮಿಸಿದ ಮೂರು ದಿನಗಳ ನಂತರವಾಗಿರುತ್ತದೆ ಆತನನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದು,ಅಷ್ಟು ದಿನ ಊರೆಲ್ಲಾ ಸುತ್ತಾಡುತ್ತಿರುವುದು ಕಂಡು ಬಂದಿದೆ.

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು ಇಡೀ ದೇಶಕ್ಕೆ ತಿಳಿದಿದೆ,ಹೀಗಿರುವಾಗ ಆ ರಾಜ್ಯದಿಂದ ಬಂದವರನ್ನು ಗಡಿಯಲ್ಲೇ ಗುರುತಿಸಿ ನೇರವಾಗಿ ಕ್ವಾರಂಟೈನ್ ಗೆ ಕಳಿಸಬೇಕಾಗಿತ್ತು.ಆದರೆ ಈ ಕೆಲಸವನ್ನು ತಾಲೂಕು ಮತ್ತು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸದ ಕಾರಣ ಆ ವ್ಯಕ್ತಿ ಬಿಂದಾಸ್ ಆಗಿ ಊರೆಲ್ಲಾ ತಿರುಗಾಡಿದ್ದಾನೆ.

ಮಾತ್ರವಲ್ಲದೆ ಕ್ವಾರಂಟೈನ್ಗೆ ಒಳಪಡಿಸಿದ ನಂತರವೂ ಕ್ವಾರಂಟೈನ್ ಕೇಂದ್ರಕ್ಕೆ ಆ ವ್ಯಕ್ತಿಯ ತಾಯಿ ಮನೆಯಿಂದಲೇ ಅಡುಗೆ ತಯಾರಿಸಿ ರವಾನೆ ಮಾಡಿ ಊರಿಡೀ ತಿರುಗಾಟ ನಡೆಸುತ್ತಿದ್ದರು ಎಂಬ ಆರೋಪವು ಇದೆ.ಅದರೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಪಾರ್ಟಿ ನಡೆಸಿದ್ದರು
ಇದಕ್ಕೆಲ್ಲ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣವಾಗಿರುತ್ತದೆ.
ಅದೇ ರೀತಿ ಕೊರೋನಾ ಪಾಸಿಟಿವ್ ಆಗಿರುವ ದರ್ಖಾಸ್ ಎಂಬ ಪ್ರದೇಶದಕ್ಕೆ ಮೂಲಭೂತ ಸೌಕರ್ಯಗಳನ್ನು ಸ್ಥಳೀಯ ಆಡಳಿತ ಸರಕಾರಗಳು ಮಾಡಿಕೊಡಬೇಕು ಹಾಗೂ ಇಂತಹ ಘಟನೆಗಳು ನಡೆಯಲು ಕಾರಣವಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ಮುಂದುವರೆಸಲಾಗುವುದೆಂದು ಎಸ್.ಡಿ.ಪಿ.ಐ ಸುಳ್ಯ ವಿಧಾನಸಬಾ ಕ್ಷೇತ್ರದ ಅಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!