Ad Widget

ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿ

ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ವತಿಯಿಂದ ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಿತು.

. . . . . . . . .


ಮಾ.19 ರಂದು ಸಂಜೆ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯಲಾಯಿತು. ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಿತು. ಮಾ.20 ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನಡೆದು ಮಾರಿಕಳ, ಪ್ರಸಾದ ವಿತರಣೆಯಾಯಿತು.

. . . . . . .

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ.19 ರಂದು ರಾತ್ರಿ ಗಂಟೆ 8.30 ರಿಂದ ಶ್ರೀ ಮಹಾವಿಷ್ಣು ಯಕ್ಷಕೂಟ ಕಳಂಜ ಇದರ ವಿದ್ಯಾರ್ಥಿಗಳಿಂದ ತುಳು ಯಕ್ಷಗಾನ ಕೋಟಿ-ಚೆನ್ನಯ ಪ್ರದರ್ಶನಗೊಂಡಿತು. ರಾತ್ರಿ ಗಂಟೆ 1.00 ರಿಂದ ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ದಾಸರಪದಗಳ ಸಂಗೀತ ಕಾರ್ಯಕ್ರಮ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ-ಪರವೂರ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗಿಗಳಾಗಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading