Ad Widget

ಮಾ.21 : ಸುಳ್ಯದಲ್ಲಿ ಅಮ್ ಆದ್ಮಿ ಪಾರ್ಟಿ ವತಿಯಿಂದ ಸಾರ್ವಜನಿಕ ಕಾರ್ಯಕ್ರಮ

ಸುಳ್ಯದಲ್ಲಿ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಾರ್ಟಿ ವತಿಯಿಂದ ಪಂಜಾಬ್ ಜನತೆಗೆ ಅಭಿನಂದನೆ ಮತ್ತು ಪಕ್ಷಕ್ಕೆ ಸೇರ್ಪಡೆ ಹಾಗೂ ಸಾರ್ವಜನಿಕ ಸಭೆಯು ಮಾ.21 ರಂದು ನಡೆಯಲಿದೆ ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವೀಕ್ಷಕ ಅಶೋಕ್ ಎಡಮಲೆ ಹೇಳಿದರು.
ಅವರು ಮಾ.19 ರಂದು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿ, ಕಾನತ್ತಿಲ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಸೇರ್ಪಡೆ ಕಾರ್ಯಕ್ರಮ ಮತ್ತು ಸಂಜೆ 4 ಗಂಟೆಗೆ ಖಾಸಗಿ ಬಸ್ ನಿಲ್ದಾಣ ಬಳಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಮುಖ್ಯಸ್ಥ ವಿಜಯ ಶರ್ಮ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಮ್, ಬೆಂಗಳೂರು ಮಹಾನಗರದ ಉಪಾಧ್ಯಕ್ಷ ಸುರೇಶ್ ರಾತೋಡ್ ಬೆಂಗಳೂರು, ಕರ್ನಾಟಕ ರಾಜ್ಯದ ಯುವ ಘಟಕದ ಅಧ್ಯಕ್ಷ ಮುಕುಂದ ಗೌಡ, ದ.ಕ ಜಿಲ್ಲೆಯ ಸಂಚಾಲಕ ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಸಂಘಟಕ ಸ್ಟೀಫನ್ ರಿಚಾರ್ಡ್ ಲೋಬೋ, ದ.ಕ ಹಿರಿಯ ಮುಖಂಡ ರೋಬೋಟ್ ರೇಂಗೋ, ಉಪ್ಪಿನಂಗಡಿಯ ಉಸ್ತುವಾರಿ ಆನಂದ ಗೌಡ, ಸುಳ್ಯ ಸಹಸಂಚಾಲಕ, ರಾಮಕೃಷ್ಣ ಬೀರಮಂಗಿಲ, ಸುಳ್ಯ ಸಹಸಂಚಾಲಕ ಮೋಹನ್ ದಾಸ್ ಎಣ್ಣೆಮಜಲು, ಸುಳ್ಯ ಸಹಸಂಚಾಲಕ ಕೇಪು ತೋಡಿಕಾನ, ಕಡಬ ಉಸ್ತುವಾರಿ
ರಶೀದ್ ಪೀಳ್ಯ, ಸುಳ್ಯದ ಕಾರ್ಯದರ್ಶಿ ಗಣೇಶ್ ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜೊತೆ ಕಾರ್ಯದರ್ಶಿ ಕುಮಾರ್ ಜಯನಗರ, ಸುಳ್ಯ ವಿಧಾನಸಭಾ ಕ್ಷೇತ್ರದ ಸಹಸಂಚಾಲಕ ರಶೀದ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading