Ad Widget

ಅಚ್ರಪ್ಪಾಡಿ : ನವೀಕೃತ ಶಾಲಾ ಗ್ರಂಥಾಲಯ ಉದ್ಘಾಟನೆ- ಪುಸ್ತಕ ಕೊಡುಗೆ

ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಧ್ಯಾ ರಶ್ಮಿ ಸೇವಾ ಸಂಘ ಹಾಗೂ 4ಹೆಚ್ ಟ್ರಸ್ಟ್ ಇವರ ವತಿಯಿಂದ ನೀಡಿದ ಶಾಲೆಯ ಗ್ರಂಥಾಲಯದ ಕೋಣೆಗೆ ಪ್ಲೇವುಡ್ ಸ್ಕ್ರೀನ್ ಹಾಗೂ ಪುಸ್ತಕಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಗ್ರಂಥಾಲಯದ ಕೋಣೆಗೆ ಪ್ಲೇವುಡ್ ಸ್ಕ್ರೀನ್ ಅಳವಡಿಕೆಗೆ ಮಾಡಿಸಿದ ಶಾಲೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಸಂಧ್ಯಾ ರಶ್ಮಿ ಸೇವಾ ಸಂಘದ ಗೌರವ ಅಧ್ಯಕ್ಷ ಬಾಬುಗೌಡ ಅಚ್ರಪ್ಪಾಡಿ ಅಧ್ಯಕ್ಷತೆಯನ್ನು ವಹಿಸಿ, ನೂತನ ಗ್ರಂಥಾಲಯ ಕೋಣೆಯ ಉದ್ಘಾಟಿಸಿದರು.

. . . . . . . . .

ಶಾಲಾ ಗ್ರಂಥಾಲಯಕ್ಕೆ 4ಹೆಚ್ ಟ್ರಸ್ಟ್ ಪದಾಧಿಕಾರಿಗಳಾದ ರವೀಂದ್ರ ಉಬರಡ್ಕರವರ ವತಿಯಿಂದ ಕೊಡುಗೆಯಾಗಿ ನೀಡಿದ ಅರವತ್ತು ಪುಸ್ತಕಗಳನ್ನು ನಿವೃತ್ತ ಡಿ ಎಚ್ ಒ, ಸಂಧ್ಯಾ ರಶ್ಮಿ ಸೇವಾ ಸಂಘ ಅಧ್ಯಕ್ಷ ಡಾ.ರಂಗಯ್ಯರವರು ಹಸ್ತಾಂತರಿಸಿದರು. ಜಿಲ್ಲಾ ಆರೋಗ್ಯ ಇಲಾಖೆಯ ನಿವೃತ್ತ ಮೇಲ್ವಿಚಾರಕ ಸುಬ್ರಹ್ಮಣ್ಯ ಹೊಳ್ಳ ,ಸಂಧ್ಯಾ ರಶ್ಮಿ ಸೇವಾ ಸಂಘದ ಕೋಶಾಧಿಕಾರಿ, ನಿವೃತ್ತ ಪ್ರಾಂಶುಪಾಲ ಕೆ ವಿ ದಾಮೋದರ, ಸಂಧ್ಯಾ ರಶ್ಮಿ ಸೇವಾ ಸಂಘದ ಕಾರ್ಯದರ್ಶಿ,
ಶಿಕ್ಷಣ ಇಲಾಖೆಯ ನಿವೃತ್ತ ಶಿಕ್ಷಣ ಸಂಯೋಜಕ ಸಿ.ಎ.ಕೇಶವ,
ಸಂಧ್ಯಾ ರಶ್ಮಿ ಸೇವಾ ಸಂಘದ ನಿರ್ದೇಶಕರು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ಉಪಸ್ಥಿತರಿದ್ದರು. ಶಾಲಾ ಪೋಷಕರು ಉಪಸ್ಥಿತರಿದ್ದರು, ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ಸ್ವಾಗತಿಸಿ,ಶಾಲಾ ಶಿಕ್ಷಕರಾದ ಚಿನ್ನಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading