ಲಾಕ್ ಡೌನ್ ಅವಧಿ ಯನ್ನು ಸದುಪಯೋಗ ಪಡಿಸಿಕೊಂಡ ಮುಂಡೋಡಿಯ ಯುವ ತರುಣರು ಒಂದು ಉತ್ತಮ ಕಿರುಚಿತ್ರ ರಚಿಸಿದ್ದು ಇದೀಗ ಬಿಡುಗಡೆಗೊಂಡಿದೆ. ಇಲ್ಲೂ ಬಿಡುಗಡೆ ಕಾರ್ಯಕ್ರಮ ವನ್ನು ವಿಶೇಷವಾಗಿ ನಡೆಸಿದ್ದಾರೆ. ತಮ್ಮ ಕೃಷಿ ಚಟುವಟಿಕೆಯ ಮಧ್ಯೆಯೇ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ತಮ್ಮ ತಮ್ಮ ಮನೆಯಿಂದಲೇ ಬಿಡುಗಡೆಗೊಳಿಸಿ ಯೂಟ್ಯೂಬ್ ನಲ್ಲಿ ಚಾಲನೆ ನೀಡಲಿದ್ದಾರೆ. ಇದರಿಂದ ಸಮಯ ಉಳಿತಾಯ, ಅಂತರ ಕಾಪಾಡಿಕೊಂಡ ಸೂಚನೆ ಸಮಾಜಕ್ಕೆ ನೀಡಿದಂತಾಗಿದೆ. ಆಧುನಿಕತೆಯ ತೆಕ್ಕೆಗೆ ಜಾರುವ ಪ್ರಕೃತ ವಿದ್ಯಮಾನ ಒಳಗೊಂಡ ಕನ್ನಡ ಕಿರುಚಿತ್ರ ಇದಾಗಿದೆ. ಕಲಾವಿದರಾಗಿ ಸೃಜನ್ ಮುಂಡೋಡಿ ಮತ್ತು ಹೊನ್ನಪ್ಪ ಗೌಡ ಕುತ್ಯಾಳ, ಸಂಗೀತ ವೀಕ್ಷಿತ್ ಕುತ್ಯಾಳ. ಪ್ರಸನ್ನ ನಿತ್ಯಾನಂದ ಮುಂಡೋಡಿ ಮತ್ತು ಜಯರಾಮ ದೇರಪ್ಪಜ್ಜನ ಮನೆ ಕಂಠಧ್ವನಿ, ಧ್ರುವ ಮುಂಡೋಡಿ ಸಂಕಲನ, ನಿಶಿತ್ ಮುಂಡೋಡಿ ಚಿತ್ರಕಥೆ, ನಿರ್ದೇಶನ ಹಾಗೂ ಛಾಯಾಗ್ರಹಣ ಸೇರೆ ಹಿಡಿದಿದ್ದಾರೆ. ಈ ಕಿರುಚಿತ್ರವನ್ನು ಕೆಳಗೆ ನೀಡಿದ ಲಿಂಕ್ ನಲ್ಲಿ ವೀಕ್ಷಿಸಬಹುದಾಗಿದೆ.
- Sunday
- November 24th, 2024