Ad Widget

ಪತ್ರಕರ್ತ ಬಾಲಕೃಷ್ಣ ಭೀಮಗುಳಿಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘವು ಸಾಧಕ ಪತ್ರಕರ್ತರಿಗೆ ಕೊಡಮಾಡುವ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಬಾರಿಯ ಪ್ರಶಸ್ತಿಗೆ ಹರಿಹರ ಪಲ್ಲತ್ತಡ್ಕದವರಾಗಿದ್ದು, ಕಾರ್ಕಳ ತಾಲೂಕಿನ ಉದಯವಾಣಿ ಪತ್ರಿಕೆ ವರದಿಗಾರರಾಗಿರುವ ಬಾಲಕೃಷ್ಣ ಭೀಮಗುಳಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

. . . . . . . . .

ಅರಣ್ಯ ಕುರಿತ ಅತ್ಯುತ್ತಮ ವರದಿಗೆ ಕೊಡಲ್ಪಡುವ ಪ್ರತಿಷ್ಠಿತ ಆರ್. ಎಲ್. ವಾಸುದೇವರಾವ್ ಪ್ರಶಸ್ತಿಗೆ ಇವರು ಆಯ್ಕೆಯಾಗಿದ್ದಾರೆ. ಸುಬ್ರಹ್ಮಣ್ಯ ಭಾಗದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಬಳಿಕ ಉಡುಪಿ ಜಿಲ್ಲೆ ಅನಂತರದಲ್ಲಿ ಕಾರ್ಕಳ ತಾಲೂಕು ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜ್ವಲಂತ ಸಮಸ್ಯೆ ಸಹಿತ ಮಾನವಸಾಕ್ತಿಯ ಹಲವಾರು ಲೇಖನಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ತೆರೆಮರೆಯಲ್ಲಿ ಸಾಧನೆಗೈಯ್ಯುತ್ತಿರುವ ಸದಾ ಕ್ರಿಯಾಶೀಲವಾಗಿರುವ ಸಾಧಕ ಪತ್ರಕರ್ತರಾಗಿದ್ದಾರೆ. ಇವರ ಈ ಎಲ್ಲ ಸಾಧನೆ ಫಲ ಎಂಬಂತೆ ಈ ಪ್ರಶಸ್ತಿ ಲಭಿಸಿದೆ. ಇವರು ಹರಿಹರಪಲ್ಲತ್ತಡ್ಕ ಭೀಮಗುಳಿ ಪುಟ್ಟಣ್ಣ ಮತ್ತು ಮನೋರಮ ದಂಪತಿಗಳ ಪುತ್ರ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading